ವೈದ್ಯೆ ರೇಪ್ ಪ್ರಕರಣ ಆರೋಪಿಗಳು ಪೋಲಿಸ್ ಎನ್ ಕೌಂಟರ್ ಗೆ ಬಲಿ

ಹೈದರಬಾದ್ : (ಡಿ.06) ಹೈದರಬಾದ್ ಪಶು ವೈದ್ಯೆ ಮೇಲಿನ ರೇಪ್ ಹಾಗೂ ಕೊಲೆ ಪ್ರಕರಣ ಮಹತ್ವದ ತಿರುವು ಪಡೆದಿದ್ದು ಪ್ರಕರಣದ ನಾಲ್ಕು ಆರೋಪಿಗಳು ಇಂದು ಮುಂಜಾನೆ 3.30 ರ ಸಮಯದಲ್ಲಿ ಪೋಲೀಸ್ ರ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ.

ಹೈದರಬಾದ್

ಘಟನೆ ಮರುಸೃಷ್ಟಿಗೆಂದು ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದಾಗ ಆರೋಪಿಗಳು ತಪ್ಪಿಸಲು ಯತ್ನಿಸಿದ್ದು ಈ ವೇಳೆ ಬೇರೆ ವಿಧಿ ಇಲ್ಲದೆ ಪೋಲೀಸರು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ್ದಾರೆ. ಕೋರ್ಟ್ ಆದೇಶದ ಮೇರೆ ಜೈಲಿನಲ್ಲಿದ್ದ ಈ ನಾಲ್ಕು ಆರೋಪಿಗಳನ್ನು ಬೆಳಗ್ಗಿನ ಜಾವ 3.30 ಕ್ಕೆ ಆಪರಾಧ ನಡೆದ ಸ್ಥಳ ರಾಷ್ಟ್ರೀಯ ಹೆದ್ದಾರಿ 44 ರ ಸಮೀಪ ಕರೆದುಕೊಂಡು ಹೋದ ಸಂದರ್ಭ ಆರೋಪಿಗಳು ತಪ್ಪಿಸಲು ಯತ್ನಿಸಿದ್ದರು. ಪೋಲೀಸ್ ರ ಈ ದಿಟ್ಟ ಕ್ರಮಕ್ಕೆ ದೇಶಾದದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.

CATEGORIES
Share This

COMMENTS

Wordpress (0)
Disqus ( )
error: Content is protected !!