ಮುಗಿಯದ ಕಾಮುಕರ ಅಟ್ಟಹಾಸ – 6ರ ಬಾಲಕಿ ಮೇಲೆ ತರಗತಿಯಲ್ಲೇ ಅತ್ಯಾಚಾರಗೈದ ಶಿಕ್ಷಕ

ಕೋಲ್ಕತ್ತಾ : (ಡಿ.04) ಹೈದರಾಬಾದ್ ಪಶುವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣದ ನಂತರ ಜನರು ಕಾಮುಕರ ಅಟ್ಟಹಾಸವನ್ನು ವಿರೋಧಿಸಿ ಅವರನ್ನು ಗಲ್ಲಿಗೇರಿಸಿ ಎಂದು ಸಿಡಿದ್ದೆದ್ದಿದ್ದಾರೆ. ಈ ಮಧ್ಯೆ ಶಾಲಾ ಶಿಕ್ಷಕನೋರ್ವ ತರಗತಿಯಲ್ಲಿಯೇ 6 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ವಿಕೃತಿ ಮೆರೆದಿದ್ದಾನೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‍ನಲ್ಲಿ ಈ ಘಟನೆ ನಡೆದಿದೆ. ಚಂದ್ರಮನ್ ಕಾವಸ್(51) ಅತ್ಯಾಚಾರ ಮಾಡಿದ ಕಾಮುಕ ಶಿಕ್ಷಕ. ಗುರುವಾರದಂದು ಶಾಲೆಯಲ್ಲಿ ಮಕ್ಕಳೆಲ್ಲಾ ಮೈದಾನದಲ್ಲಿ ಆಟವಾಡುತ್ತಿದ್ದರು. ಆದರೆ ಬಾಲಕಿ ಮಾತ್ರ ಸುಮ್ಮನೆ ತರಗತಿಯಲ್ಲಿಯೇ ಕುಳಿತ್ತಿದ್ದಳು. ಈ ವೇಳೆ ತರಗತಿಗೆ ಬಂದ ಶಿಕ್ಷಕ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದನು. ಅಷ್ಟೇ ಅಲ್ಲ ಈ ಬಗ್ಗೆ ಯಾರ ಬಳಿ ಹೇಳಬೇಡ ಎಂದು ಬಾಲಕಿಯನ್ನು ಬೆದರಿಸಿದ್ದಾನೆ.

Rape on child

ಭಯಗೊಂಡಿದ್ದ ಬಾಲಕಿ ಮನೆಗೆ ಬಂದ ತಾಯಿಯ ಬಳಿ ಈ ವಿಚಾರ ಹೇಳಿದ್ದಳು. ಆದರೆ ಮೊದಲು ತಾಯಿ ಮಗಳ ಮಾತನ್ನು ನಂಬಿರಲಿಲ್ಲ. ಬಳಿಕ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಬಾಲಕಿ ಕಣ್ಣಿರಿಟ್ಟಾಗ ತಾಯಿ ತಕ್ಷಣ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇರೆಗೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಬಯಲಾಗಿದೆ. ಈ ಸಂಬಂಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಸೆರೆಹಿಡಿಯಲು ಬಲೆ ಬೀಸಿದ್ದರು. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Rape on women

ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೂ ಕಾಮುಕರ ಅಟ್ಟಹಾಸ ಮಾತ್ರ ಕಡಿಮೆಯಾಗಿಲ್ಲ. ಮಕ್ಕಳಿಗೆ ಒಳ್ಳೆಯ ವಿದ್ಯೆ, ತಿಳುವಳಿಕೆ ನೀಡಬೇಕಾದ ಶಿಕ್ಷಕರೇ ಈ ರೀತಿ ಕಾಮಪೀಶಾಚಿಗಳಾಗುತ್ತಿರುವುದು ವಿಪರ್ಯಾಸ. ಅಲ್ಲದೆ ಇತ್ತೀಚೆಗೆ ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಮಟ್ಟಹಾಕಲು ಕಠಿಣ ಕಾನೂನು ರಚನೆಯಾಗಬೇಕಾಗಿದೆ.

CATEGORIES
Share This

COMMENTS

Wordpress (0)
Disqus ( )
error: Content is protected !!