ಅತ್ಯಾಚಾರ ಮಾಡಿ ಜೈಲು ಸೇರಿದ್ದ ಆರೋಪಿಗಳು ವಾಪಸ್​ ಬಂದು ಆ ಯುವತಿಗೆ ಬೆಂಕಿ ಹಚ್ಚಿದರು ಉನ್ನಾವೋದಲ್ಲಿ ಭೀಕರ ಘಟನೆ

ಲಕ್ನೋ : (ಡಿ.05) ಉನ್ನಾವೋದಲ್ಲಿ ಈ ವರ್ಷ ಮಾರ್ಚ್​​ನಲ್ಲಿ 23 ವರ್ಷದ ಯುವತಿಯೋರ್ವಳು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಹಾಗೂ ಅದನ್ನು ವಿಡಿಯೋ ಮಾಡಿ ಹಿಂಸೆ ನೀಡಲಾಗುತ್ತಿದೆ ಎಂದು ಸುಮಾರು ಐವರು ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.

Rape on child

ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಈಗ ಜಾಮೀನಿನ ಮೇಲೆ ಹೊರಬಂದಿದ್ದ ಆ ದುಷ್ಟರು ಮತ್ತೊಂದು ಹೀನಾಯ ಕೃತ್ಯ ಎಸಗಿದ್ದಾರೆ.

ಇಂದು ಕೋರ್ಟ್​ನಲ್ಲಿ ವಿಚಾರಣೆ ಇರುವ ಕಾರಣಕ್ಕೆ ಯುವತಿ ನಡೆದುಕೊಂಡೇ ಹೋಗುತ್ತಿದ್ದಳು. ಆಕೆ ರೈಲ್ವೆ ಸ್ಟೇಶನ್​ ಬಳಿ ತೆರಳುತ್ತಿದ್ದಾಗ ಆರೋಪಿಗಳ ಗುಂಪು ಅವಳನ್ನು ಸುತ್ತುವರೆದಿದೆ. ಮೊದಲು ಮಾತನಾಡಿ ನಂತರ ಎಳೆದುಕೊಂಡು ಹಳ್ಳಿಯ ಹೊರವಲಯಕ್ಕೆ ತೆರಳಿದ್ದಾರೆ. ಅಲ್ಲಿ ಆ ಯುವತಿಯ ಮೇಲೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಕ್ರೌರ್ಯ ಮೆರೆದಿದ್ದಾರೆ.

Advertising

ಯುವತಿಯ ದೇಹ ಸುಮಾರು ಶೇ.70ರಷ್ಟು ಸುಟ್ಟು ಹೋಗಿದ್ದು ಲಖನೌ ಆಸ್ಪತ್ರೆಗೆ ದಾಖಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ಪರಾರಿಯಾಗಿದ್ದಾರೆ.
ಈ ಐವರು ಆರೋಪಿಗಳಲ್ಲಿ ಹಳ್ಳಿಯ ಮುಖ್ಯಸ್ಥನ ಮಗನೂ ಇದ್ದಾನೆ ಎನ್ನಲಾಗಿದ್ದು ಆತನ ವಿರುದ್ಧ ಮಾರ್ಚ್​ನಲ್ಲಿ ಯುವತಿ ದೂರು ನೀಡಿದ್ದಳು.

CATEGORIES
Share This

COMMENTS

Wordpress (0)
Disqus ( )
error: Content is protected !!