ಪುತ್ತೂರಿನಲ್ಲಿ 27ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದ ಕರೆ ಮುಹೂರ್ತ

Kambala

ಪುತ್ತೂರು : (ಡಿ.05) ಮಹಾತೋಬಾರ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯುವ 27 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದ ಪೂರ್ವಭಾವಿಯಾಗಿ ಕರೆಮುಹೂರ್ತವನ್ನು ಕಂಬಳ ಸಮಿತಿಯ ಸಂಚಾಲಕರಾದ ಮಹಾಲಿಂಗೇಶ್ವರ ದೇವಾಲಯದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎನ್. ಸುಧಾಕರ ಶೆಟ್ಟಿಯವರು ನೆರವೇರಿಸಿದರು. ಬಳಿಕ ಮಾತನಾಡಿದ ಸುಧಾಕರ ಶೆಟ್ಟಿಯವರು ಕಳೆದ ಹಲವಾರು ವರ್ಷಗಳಿಂದ ಪುತ್ತೂರು ಕೋಟಿ ಚೆನ್ನಯ ಕಂಬಳವು ಬಾರಿ ಅದ್ದೂರಿಯಾಗಿ ಮತ್ತು ಶಿಸ್ತುಬದ್ದವಾಗಿ ನೆರವೆರುತ್ತಾ ಬಂದಿದ್ದು, ಅಂತೆಯೇ ಈ ಬಾರಿಯೂ ದೈವದೇವರ ಅನುಗ್ರಹದಿಂದ ಅತ್ಯಂತ ವೈಭವಪೂರ್ವಕವಾಗಿ ನೆರವೇರಲಿದೆ ಎಂದರು. ಕರೆಮುಹೂರ್ತಕ್ಕೂ ಮುನ್ನ ಮಹತೋಬಾರ ಮಹಾಲಿಂಗೇಶ್ವರ ದೇವಸ್ಥಾನದ ಮೂಲ ನಾಗದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

Kambala

ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ, ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಸಮಿತಿಯ ಪದಾಧಿಕಾರಿಗಳಾದ ಸುದೇಶ್ ಕುಮಾರ್ ಚಿಕ್ಕಪುತ್ತೂರು, ರೋಶನ್ ರೈ ಬನ್ನೂರು, ಸುದೀರ್ ಶೆಟ್ಟಿ ನೆಹರು ನಗರ, ಉಮೇಶ್ ಕರ್ಕೇರಾ, ಜಿನ್ನಪ್ಪ ಪೂಜಾರಿ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!