ತಾರತಮ್ಯಕ್ಕೆ ನೊಂದು ಇಸ್ಲಾಂ ಗೆ ಮತಾಂತರವಾಗುತ್ತಿರುವ ಸಾವಿರಾರು ದಲಿತರು

ಚೆನ್ನೈ : (ಡಿ.26) ಹಿಂದು ಧರ್ಮದಲ್ಲಿನ ಜಾತಿ ತಾರಮ್ಯಕ್ಕೆ ನೊಂದು, ಹಾಗೂ ಸರ್ಕಾರದ ತಾರತಮ್ಯ ನೀತಿಗೆ ನೊಂದು ಸಾವಿರಾರು ಮಂದಿ ರೈತರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವುದಾಗಿ ಘೋಷಿಸಿದ್ದಾರೆ.

Dalith

ತಮಿಳುನಾಡಿನ ಮೆಪ್ಪುಪಾಲಯಂ ನ ಮೂರು ಸಾವಿರಕ್ಕೂ ಹೆಚ್ಚು ದಲಿತರು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುತ್ತಿರುವುದಾಗಿ ಘೋಷಿಸಿವೆ. ‘ತಮಿಳ್ ಪುಲಿಗಲ್’ ಸಂಘಟನೆಯ ವಾರ್ಷಿಕ ಸಭೆಯ ಬಳಿಕ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ.

Advertising

ಈ ಮತಾಂತರಕ್ಕೆ ಹಿಂದು ಧರ್ಮದಲ್ಲಿನ ಜಾತಿ ತಾರತಮ್ಯ ಮತ್ತು ಡಿಸೆಂಬರ್ 2 ರಂದು ಮೆಟ್ಟುಪಾಲ್ಯಂ ಬಳಿಯ ನಡೂರಿನಲ್ಲಿ ದಲಿತರ ಮನೆ ಮೇಲೆ ಗೋಡೆ ಕುಸಿದು 17 ಮಂದಿ ಸಾವನ್ನಪ್ಪಿದ ಪ್ರಕರಣದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂಬುದು ಸಹ ಇಸ್ಲಾಂ ಧರ್ಮ ಮತಾಂತರಕ್ಕೆ ಪ್ರಮುಖ ಕಾರಣ.

Advertising

ಜನವರಿ ಐದರಂದು ಮೆಟ್ಟುಪಾಲ್ಯಂ ನ ವಿವಿಧ ಗ್ರಾಮಗಳು, ಪಟ್ಟಣಗಳ ದಲಿತರು ಸಾಮೂಹಿಕವಾಗಿ ಇಸ್ಲಾಂ ಧರ್ಮ ಸೇರುವುದಾಗಿ ಪ್ರಕಟಿಸಿದ್ದಾರೆ. ಡಿಸೆಂಬರ್ 2 ರಂದು ಸುರಿದ ಮಳೆಗೆ ಮೆಟ್ಟುಪಾಲ್ಯಂ ನಡೂರು ಗ್ರಾಮದಲ್ಲಿ ಹದಿನೈದು ಅಡಿ ಎತ್ತರದ ಕಾಂಪೌಂಡ್ ಒಂದು ಕುಸಿದು 10 ಮಹಿಳೆ, ಇಬ್ಬರು ಮಕ್ಕಳು ಸೇರಿ ಹದಿನೇಳು ಮಂದಿ ಮರಣ ಹೊಂದಿದ್ದರು.

Dalith

ಆ ಗೋಡೆಯನ್ನು ದಲಿತರ ಕೇರಿಗೆ ಅಡ್ಡಲಾಗಿ ಕಟ್ಟಲಾಗಿತ್ತು. ದಲಿತರು ತಮ್ಮ ಮನೆಯ ಅಂಗಳ ಪ್ರವೇಶಿಸದಿರಲೆಂದೇ ಮನೆಯ ಮಾಲೀಕ ಗೋಡೆ ಕಟ್ಟಿಸಿದ್ದ, ನಂತರ ಆತನನ್ನು ಪೊಲೀಸರು ಬಂಧಿಸಿದರು. ಆತ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ದಲಿತರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ನಿರ್ಣಯ ಕೈಗೊಂಡಿದ್ದಾರೆ.

CATEGORIES
Share This

COMMENTS

Wordpress (0)
Disqus ( )
error: Content is protected !!