ಆರೆಸ್ಸೆಸ್ ಪುರುಷರು ಗುಜ್ಜರ್ ಯುವತಿಯರನ್ನು ಅಪಹರಿಸಿ ಅತ್ಯಾಚಾರ ಮಾಡುತ್ತಿದ್ದರು : ಮಾಜಿ ಆರೆಸ್ಸೆಸ್ ಸಹಾಯಕ ಆರೋಪ

ಕಣ್ಣೂರು : (ನ.17) ಮಾಜಿ ಆರೆಸ್ಸೆಸ್ ಸಹಾಯಕ ಸುಧೀಶ್ ಮಿನ್ನಿ ಬಹಿರಂಗ ಪಡಿಸಿರುವ ವಿಚಾರ ಇದೀಗ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದು, ತಮ್ಮ ಆತ್ಮ ಚರಿತ್ರೆ “ನರಕಾಸಕೆತಥೈಲ್ ಉಲ್ಲಾರಕಲ್” (Hidden Secrets of Hell) ನಲ್ಲಿ ಆರೆಸ್ಸೆಸ್ ನ ಭಯಾನಕತೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.

Rss

ಗುಜ್ಜರ್ ನಲ್ಲಿ ನಡೆದಿದ್ದ ಗಲಭೆಯ ಸಂದರ್ಭದಲ್ಲಿ ನಾನು ಆರೆಸ್ಸೆಸ್ ನ ಬಹುಮಹಡಿ ಕಟ್ಟಡದಲ್ಲಿದ್ದೆ. ಆ ವೇಳೆ ಆರೆಸ್ಸೆಸ್ ಪುರುಷರು ಹಾಗೂ ಮೇಲ್ಜಾತಿಯವರು ನೂರಾರು ಗುಜ್ಜರ್ ಯುವತಿಯರನ್ನು ಅಪಹರಿಸಿ ಅತ್ಯಾಚಾರ ಮಾಡುತ್ತಿದ್ದರು. ಯಾವ ಸಂದರ್ಭದಲ್ಲೆಲ್ಲ ಅಶಾಂತಿ ಉಂಟಾಗುತ್ತಿತ್ತೋ ಆ ಸಂದರ್ಭದಲ್ಲಿ ಯುವತಿಯರ ಅತ್ಯಾಚಾರ ನಡೆಸುವುದನ್ನು ಒಂದು ಆಚರಣೆಯಾಗಿ ನಡೆಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

Advertising

ಅತ್ಯಾಚಾರದಿಂದ ಜನಿಸಿದ ಮಕ್ಕಳನ್ನು ದತ್ತು ಪಡೆದುಕೊಂಡು ಧರ್ಮ ಮತ್ತು ಜಾತಿಗಳ ಪ್ರಾಬಲ್ಯಕ್ಕಾಗಿ ಕಾಲಾಲು ಸೈನಿಕರಾಗಿ ಬಳಸಲು ಆರೆಸ್ಸೆಸ್ ವಿಶೇಷ ಅನಾಥಾಶ್ರಮಗಳನ್ನು ನಡೆಸುತ್ತಿದೆ ಎಂದು ಮಿನ್ನಿ ಆರೋಪಿಸಿದ್ದಾರೆ. ಅಂದು ನನ್ನ ಕಿವಿಗೆ ಕೇಳಿಸಿದ್ದ ಯುವತಿಯರ ಆರ್ತನಾದ ಈಗಲೂ ನನ್ನನ್ನು ಕಾಡುತ್ತಲೇ ಇದೆ ಎಂದು ಅವರು ತಿಳಿಸಿದ್ದಾರೆ.

ಆರೆಸ್ಸೆಸ್ ಬ್ರಾಹ್ಮಣರಿಂದ ನಿಯಂತ್ರಿಸಲ್ಪಡುವ ಮೇಲ್ಜಾತಿಯವರ ಸಂಘಟನೆಯಾಗಿದೆ. ನಾನು ಬ್ರಾಹ್ಮಣನಲ್ಲದಿದ್ದರೂ ಪವಿತ್ರದಾರ(ಜನಿವಾರ) ಬಳಸಿಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನನ್ನನ್ನು ಒತ್ತಾಯಿಸಲಾಗುತ್ತಿತ್ತು ಎನ್ನುವ ಮೊದಲಾದ ವಿಚಾರಗಳನ್ನು ಅವರು ತಮ್ಮ ಆತ್ಮ ಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆಂದು ವರದಿಯಾಗಿದೆ.

Rss

ಈ ಆರೋಪವನ್ನು ಮಾಡಿರುವ ಮಾಜಿ ಆರೆಸ್ಸೆಸ್ ಸಹಾಯಕ ಸುಧೀಶ್ ಮಿನ್ನಿ ಇತ್ತೀಚೆಗೆ ಸಿಪಿಎಂನಡಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು. ತನ್ನ ಜೀವಕ್ಕೆ ಅಪಾಯವಿದೆ ಎನ್ನುವ ಕಾರಣಕ್ಕೆ ಅವರು ಸಿಪಿಎಂನ ಭದ್ರತೆಯಡಿಯಲ್ಲಿ ವಾಸವಾಗಿದ್ದಾರೆ ಎಂದು ವರದಿಯಾಗಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!