ಸಂಸದ, ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ಕಾಣೆಯಾಗಿದ್ದಾರೆ ಹುಡುಕಿಕೊಡಿ ❗ದೆಹಲಿಯಲ್ಲಿ ಪತ್ತೆಯಾದ ಪೋಸ್ಟರ್

ನವದೆಹಲಿ : (ನ.17) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಲ್ಬಣಿಸಿರುವ ವಾಯುಮಾಲಿನ್ಯ ಪರಿಸ್ಥಿತಿಯನ್ನು ಕುರಿತು ಚರ್ಚಿಸಲು ಸಂಸದೀಯ ಸಮಿತಿ ಕರೆದಿದ್ದ ಸಭೆಗೆ ಗೈರುಹಾಜರಾದ ಪೂರ್ವ ದೆಹಲಿಯ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್​ ಗಂಭೀರ್​ ವಿರುದ್ಧ ಆಮ್​ ಆದ್ಮಿ ಪಾರ್ಟಿಯ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇದರ ನಡುವೆ ದೆಹಲಿಯ ಐಟಿಒ ಮೆಟ್ರೋ ನಿಲ್ದಾಣದ ಆವರಣದಲ್ಲಿ ಗಂಭೀರ್​ ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಮನವಿ ಮಾಡಿಕೊಳ್ಳುವ ಭಿತ್ತಿಪತ್ರಗಳು ದಿಢೀರನೆ ಕಾಣಿಸಿಕೊಂಡಿವೆ.

Gautham gambir

ವ್ಯಂಗಭರಿತವಾದ ಪೋಸ್ಟರ್​ನಲ್ಲಿ “ನಾಪತ್ತೆ” ಎಂದು ಕೆಂಪು ಬಣ್ಣದಲ್ಲಿ ದಪ್ಪ ಅಕ್ಷರಗಳಲ್ಲಿ ಬರೆಯಲಾಗಿದ್ದು, ಅದಕ್ಕೆ ಹಸನ್ಮುಖಿ ಗಂಭೀರ್​ ಫೋಟೋವನ್ನು ಸೇರಿಸಿ ಕೇಂದ್ರ ದೆಹಲಿಯ ಐಟಿಒ ಆವರಣದಲ್ಲಿರುವ ಮರಗಳ ಮೇಲೆ ಅಂಟಿಸಲಾಗಿದೆ. ಗಂಭೀರ್​ ಫೋಟೋ ಕೆಳಗೆ ಈ ವ್ಯಕ್ತಿಯನ್ನು ಎಲ್ಲಾದರೂ ನೋಡಿದ್ದೀರಾ? ಕೊನೆಯದಾಗಿ ಅವರು ಇಂದೋರ್​ನಲ್ಲಿ ಜಿಲೇಬಿ ತಿನ್ನುತ್ತಿರುವಾಗ ಕಾಣಿಸಿಕೊಂಡಿದ್ದರು. ಇಡೀ ದೆಹಲಿ ಇವರಿಗಾಗಿ ಹುಡುಕಾಡುತ್ತಿದೆ ಎಂದು ಬರೆಯುವ ಮೂಲಕ ಅಣಕಿಸಲಾಗಿದೆ.

Gautham gambir
ಟೀಮ್​ ಇಂಡಿಯಾ ಮತ್ತು ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್​ ವೇಳೆ ಗಂಭೀರ್​ ವೀಕ್ಷಕ ವಿವರಣೆಗಾರರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಪಂದ್ಯದ ನಡುವೆ ಮಾಜಿ ಆಟಗಾರ ವಿವಿಎಸ್​ ಲಕ್ಷ್ಮಣ್​ರೊಂದಿಗೆ ಜಿಲೇಬಿ ತಿನ್ನುತ್ತಿರುವ ಫೋಟೋವನ್ನು ಆಪ್​ ಕಾರ್ಯಕರ್ತರು ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿ ನಮ್ಮ ಮಾನ್ಯ ಸಂಸದರು ವಾಯುಮಾಲಿನ್ಯ ಕುರಿತಾದ ಸಭೆಗೆ ಗೈರಾಗಿ ಇಲ್ಲಿ ಜಿಲೇಬಿ ತಿನ್ನುತ್ತಿದ್ದಾರೆ ಎಂದು ಟೀಕಿಸಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!