ನಾಗಪುರದ RSS ಕಛೇರಿಗೆ ಮುತ್ತಿಗೆಗೆ ಉದ್ದೇಶಿಸಿದ್ದ BAMCEF ಅಧ್ಯಕ್ಷ ಮೇಶ್ರಾಮ್ ಬಂಧನ.
ಮುಂಬೈ (ಅ:07) ನಾಗಪುರದ RSS ಕೇಂದ್ರ ಕಛೇರಿಗೆ ಇಂದು ಲಕ್ಷಾಂತರ ಕಾರ್ಯಕರ್ತರೊಂದಿಗೆ ಮುತ್ತಿಗೆ ಹಾಕಲು ಉದ್ದೇಶಿದ್ದ BAMCEFನ ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೇಶ್ರಾಮ್ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಸಂವಿಧಾನದ ಮೌಲ್ಯದ ವಿರೋಧ ಸಂಘ ಪರಿವಾರ ಕೆಲಸ ಮಾಡುತ್ತಿದೆ ಎಂದು ವಾಮನ್ ಮೇಶ್ರಾಮ್ ಆರೋಪಿಸಿ, ಇವತ್ತು ಪ್ರತಿಭಟನೆಗೆ ಕರೆ ನೀಡಿದರು.
ಪ್ರತಿಭಟನೆಗೆ ಪೋಲಿಸ್ ಅನುಮತಿ ನೀಡದಿದ್ದ ಕಾರಣ ನಾಗಪುರ ಹೈಕೋರ್ಟ್ ಗೆ ಅನುಮತಿ ಕೇಳಿದ್ದರು. ಇಲ್ಲಿಯೂ ಅನುಮತಿ ಸಿಗದೇ, ಸುಪ್ರೀಂ ಕೋರ್ಟ್ ಗೆ ಅನುಮತಿ ಕೇಳಲು ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ಇವತ್ತು ವಿಚಾರಣೆಗೆ ಬರಲಿದೆ ಎನ್ನಲಾಗಿದೆ.

ನಾಗ್ಪುರದಲ್ಲಿರುವ RSS ಕೇಂದ್ರ ಕಛೇರಿ
ಬಂಧನಕ್ಕೆ ಒಳಗಾಗಿರುವ ಮೇಶ್ರಾಮ್ ಅವರು ದೇಶಾದ್ಯಂತ ನಾಲ್ಕು ಹಂತಗಳಲ್ಲಿ ಪ್ರತಿಭಟನೆ ಕರೆ ನೀಡಿದ್ದಾರೆ. ಭಾರತ ಅಷ್ಟೇ ಅಲ್ಲದೆ ವಿದೇಶದಲ್ಲಿಯೂ ನೆಲೆಸಿರುವ ಲಕ್ಷಾಂತರ ಭಾರತೀಯರು ಮೇಶ್ರಾಮ್ ಅವರನ್ನು “ನಮ್ಮ ಮೂಲನಿವಾಸಿ ನಾಯಕ” ಎಂದು ಭಾವಿಸಿದ್ದಾರೆ. ಈ ಬಂಧನ ಭಾರತ ಅಷ್ಟೇ ಅಲ್ಲ ಖಂಡಿತ ವಿದೇಶದಲ್ಲಿಯೂ ಸದ್ದು ಮಾಡಲಿದೆ.