ಆರ್ ಎಸ್ ಎಸ್ ಗೆ ಗೌರವ ಸೂಚಿಸುವ ಸಲುವಾಗಿ ಮತಾಂತರ ಬಿಲ್ ಗೃಹ ಸಚಿವ

ಚಿಕ್ಕಮಗಳೂರು : (ಅ.06) ದೇಶದಲ್ಲಿ ಧರ್ಮದ ಆಧಾರದ ಮೇಲೆ ಆಳ್ವಿಕೆ ಮಾಡಬೇಕು ಎಂದು ವಿದೇಶಗಳಿಂದ ಹಣ ತಂದು ನಮ್ಮ ದೇಶದ ಜನಸಾಮಾನ್ಯರನ್ನು ಸಾಂಸ್ಕೃತಿಕ ಕೊಂಡಿಯಿಂದ ಬೇರ್ಪಡಿಸುವ ಹುನ್ನಾರ ನಡೆಯುತ್ತಿದೆ. ಕೆಲವರಿಗೆ ಕೇಸರಿ ಎಂದರೆ ಅಲರ್ಜಿ, ಗಣಪತಿ ಉತ್ಸವದಲ್ಲಿ ಕೇಸರಿ ಧ್ವಜ ಹಾರಿಸಬಾರದು ಎನ್ನುವುದು ಅವರ ಮಾನಸಿಕ ವಿಕೃತಿಯಾಗಿದೆ.

Araga jnanendra

ನನ್ನನ್ನು ಈ ಹಂತಕ್ಕೆ ಬೆಳೆಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಗೌರವಪೂರ್ವಕವಾಗಿ ಮತಾಂತರ ನಿಷೇಧ ಬಿಲ್ ಪಾಸ್ ಮಾಡಲಾಗಿದೆ, ಇದು ನನ್ನ ಜೀವನದ ಅಪೂರ್ವ ಕ್ಷಣ ಎಂದು ಭಾವಿಸುತ್ತೇನೆ ಎಂದು
ಮಾವಿನಕಟ್ಟೆ ಗ್ರಾಮದಲ್ಲಿ ಹಿಂದು ಜನಜಾಗೃತಿ ಸಮಿತಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ
ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!