ದೇಶಾದ್ಯಂತ ಎನ್‌ಆರ್‌ಸಿ ಜಾರಿಗೆ ಸದ್ಯ ಚಿಂತನೆ ನಡೆಯುತ್ತಿಲ್ಲ. ಅಮಿತ್ ಶಾ ‘ಯು ಟರ್ನ್’

ಹೊಸದಿಲ್ಲಿ : (ಡಿ.25) ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯನ್ನು ಅಖಿಲ ಭಾರತ ಮಟ್ಟದಲ್ಲಿ ಜಾರಿಗೊಳಿಸುವ ಬಗ್ಗೆ ಸದ್ಯ ಯಾವುದೇ ಚಿಂತನೆ ನಡೆಯುತ್ತಿಲ್ಲವೆಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಕೇಂದ್ರ ಗೃಹ ಸಚಿವ ಮಂಗಳವಾರ ಸಮರ್ಥಿಸಿಕೊಂಡಿದ್ದಾರೆ. ಎನ್‌ಸಿಆರ್ ಅನುಷ್ಠಾನದ ಬಗ್ಗೆ ಸಂಸತ್‌ನಲ್ಲಾಗಲಿ ಅಥವಾ ಕೇಂದ್ರ ಸಂಪುಟದಲ್ಲಾಗಲಿ ಯಾವುದೇ ಚರ್ಚೆಗಳು ನಡೆದಿಲ್ಲವೆಂದು ಅವರು ಹೇಳಿದ್ದಾರೆ.

Amith sha

ಎನ್‌ಆರ್‌ಸಿಯನ್ನು ಭಾರತದಾದ್ಯಂತ ಜಾರಿಗೊಳಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲವೆಂದು ದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ರ‍್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದರು. ಆದರೆ ಅಮಿತ್ ಶಾ ಇದಕ್ಕೂ ಮುನ್ನ ನೀಡಿದ ಹೇಳಿಕೆಯೊಂದರಲ್ಲಿ ಕೇಂದ್ರ ಸರಕಾರವು ದೇಶಾದ್ಯಂತ ಎನ್‌ಸಿಆರ್ ಅನ್ನು ಜಾರಿಗೊಳಿಸಲಿದೆ ಎಂದು ಹೇಳಿದ್ದರು. ಈ ಇಬ್ಬರು ನಾಯಕರು ಎನ್‌ಸಿಆರ್ ಬಗ್ಗೆ ನೀಡಿದ ವ್ಯತಿರಿಕ್ತ ಹೇಳಿಕೆಗಳ ಬಗ್ಗೆ ವ್ಯಾಪಕ ಗೊಂದಲ ಸೃಷ್ಟಿಯಾಗಿದೆ.

CATEGORIES
Share This

COMMENTS

Wordpress (0)
Disqus ( )
error: Content is protected !!