ಕಾಲೇಜು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ – ಬಾಕಿ ಉಳಿದ ನಾಲ್ಕು ಆರೋಪಿಗಳಿಗೂ ಜಾಮೀನು

ಪುತ್ತೂರು : (ಡಿ. 12) ಇಲ್ಲಿನ ಕಾಲೇಜ್ ಒಂದರ ವಿದ್ಯಾರ್ಥಿನಿಯ ಮೇಲೆ ಅದೇ ಕಾಲೇಜಿನ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂದಿತರಾಗಿದ್ದ ಐದು ವಿದ್ಯಾರ್ಥಿಗಳಿಗೂ ರಾಜ್ಯ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಐವರು ವಿದ್ಯಾರ್ಥಿಗಳ ಪೈಕಿ `ರಾಜಶ್ರೀ’ ಕೃಪದ ನಾಗೇಶ್ ನಾಯ್ಕ್ ಎಂಬವರ ಪುತ್ರ ಪ್ರಜ್ವಲ್ (೧೯ವ) ಎಂಬಾತನಿಗೆ ಹತ್ತು ದಿನಗಳ ಹಿಂದೆ ಜಾಮೀನು ಮಂಜೂರು ಮಾಡಿ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿತ್ತು .

Vivekanda college

ಬಜತ್ತೂರು ಗ್ರಾಮದ ಗಾಣದಮೂಲೆ ನಿವಾಸಿ ರಾಧಾಕೃಷ್ಣ ಎಂಬವರ ಪುತ್ರ ಗುರುನಂದನ್ (೧೯ವ), ಪೆರ್ನೆ ಕಡಂಬು ನಿವಾಸಿ ಸದಾಶಿವ ಎಂಬವರ ಪುತ್ರ ಕಿಶನ್ (೧೯ವ), ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಕಾಂತಪ್ಪ ಗೌಡರವರ ಪುತ್ರ ಸುನಿಲ್ (೧೯ವ) ಮತ್ತು ಬಂಟ್ವಾಳ ಬರಿಮಾರು ಗ್ರಾಮದ ಬಲ್ಯ ನಿವಾಸಿ ಸುಬ್ಬಣ್ಣ ಶೆಟ್ಟಿ ಎಂಬವರ ಪುತ್ರ ಪ್ರಖ್ಯಾತ್ (೧೯ವ) ಇಂದು ಜಾಮೀನು ಮಂಜೂರುಗೊಂಡ ಆರೋಪಿಗಳು.

Advertising

2019 ರ ಮಾರ್ಚ್ ತಿಂಗಳ ಅಂತ್ಯದಲ್ಲಿ ನಡೆದ ಪ್ರಕರಣ, ಆತ್ಯಾಚಾರ ಪ್ರಕರಣದ ವಿಡಿಯೋ ಶೇರ್ ಆಗುವುದರೊಂದಿಗೆ ಜುಲೈ ತಿಂಗಳ ಆರಂಭದಲ್ಲಿ ಮುನ್ನಲೆಗೆ ಬಂದಿತ್ತು . ಜು 4ರಂದು ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ಎಸಗಿದ ಐವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪುತ್ತೂರಿನ ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು .

Advertising

ಆರೋಪಿಗಳ ಪರ ಹೈಕೋರ್ಟ್ ನಲ್ಲಿ ವಕೀಲರಾದ ಅರುಣ್ ಶ್ಯಾಮ್ ಪುತ್ತೂರು ಮತ್ತು ಮಹೇಶ್ ಕಜೆ, ರಾಜಶೇಖರ ಇಲ್ಯಾರು ವಾದಿಸಿದ್ದರು. ಬೆಳ್ಳಿಪ್ಪಾಡಿಯ ಕಠಾರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಆರೋಪಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೇ, ಕೃತ್ಯದ ವಿಡಿಯೋ ಚಿತ್ರಿಕರಣ ಮಾಡಿ ಬಳಿಕ ಕಾಲೇಜು ಚುನಾವಣೆಯ ಸಂದರ್ಭ ಪರಿಸ್ಥಿಯ ಲಾಭ ಪಡೆಯಲು ಈ ವಿಡಿಯೋ ಬಿಡುಗಡೆ ಮಾಡಲಾಗಿದ್ದು,ಅದು ಬಳಿಕ ವೈರಲ್ ಆಗಿತ್ತು . ಈ ಪ್ರಕರಣ ರಾಜ್ಯದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

CATEGORIES
Share This

COMMENTS

Wordpress (0)
Disqus ( )
error: Content is protected !!