18ರ ಯುವಕನ 584 ನೇ ಯಶಸ್ವಿ ಹಾವು ಹಿಡಿಯುವ ಕಾರ್ಯಚರಣೆ

ಪುತ್ತೂರು : (ಡಿ.10) ಹಾವನ್ನು ಕಂಡು ಹೆದರುವ ಜನಸಮೂಹ ಒಂದೆಡೆಯಾದರೆ ಹಾವನ್ನು ಹಿಡಿದು ಸುರಕ್ಷಿತವಾದ ಕಾಡಿಗೆ ಬಿಡುವ ಕೆಲವೇ ಕೆಲವು ಜನನರಲ್ಲಿ ಪುತ್ತೂರಿನ ಸಾಮೆತಡ್ಕ ನಿವಾಸಿ ವಯಸ್ಸು ಇನ್ನೂ 18 ದಾಟದ ಮುಹಮ್ಮದ್ ಪಾಯಿಝ್ ಒಬ್ಬರು ಎಂದರೆ ತಪ್ಪಾಗದೂ.

Fayiz

ಪಾಯಿಝ್ ತನ್ನ ಪ್ರಾಥಮಿಕ ಶಾಲೆ ಯಲ್ಲಿ ಇರುವಾಗ ಪುತ್ತೂರಿನ ಉರಗತಜ್ಞ ರವೀಂದ್ರನಾಥ್ ಐತಾಳ್ ರವರು ಶಾಲೆಯಲ್ಲಿ ಇದ್ದ ಹಾವನ್ನು ಹಿಡಿದು ಹಾವಿನ ಬಗ್ಗೆ ಮಾಹಿತಿ ನೀಡಿದರು ಈ ಮಾಹಿತಿಯನ್ನೆ ಬಳುವಳಿಯಾಗಿ ಪಡೆದ ಮುಹಮ್ಮದ್ ಪಾಯಿಝ್ ಇಲ್ಲಿಯವರೆಗೆ ಸರಿ ಸುಮಾರು 584 ವಿಷಪೂರಿತ ಮತ್ತು ವಿಷಪೂರಿತವಲ್ಲದ ಹಾವುಗಳನ್ನು ಹಿಡಿದಿದ್ದಾರೆ. ಹಾಗೆಯೇ ಇಂದು ಡಿಸೆಂಬರ್ 10 ರಂದು ಪುತ್ತೂರಿನ ದರ್ಬೆ ಪ್ರೀತಿ ಆರ್ಕೆಡ್ ಸಮೀಪ ಕಾಣಿಸಿಕೊಂಡ ವಿಷಪೂರಿತ ನಾಗರಹಾವನ್ನು ಯಶಸ್ವಿಯಾಗಿ ಹಿಡಿಯುವ ಮೂಲಕ 92ನೇ ನಾಗರ ಹಾವು ಹಿಡಿದಂತಾಗಿದೆ.

Fayiz

ಮುಹಮ್ಮದ್ ಪಾಯಿಝ್ ರವರು ಮನೆಯ ಸುತ್ತ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಎಲ್ಲಾ ಬಗೆಯ ವಿಷಪೂರಿತ /ವಿಷಪೂರಿತವಲ್ಲದ ಹಾವುಗಳನ್ನು ಹಿಡಿದು ಅವುಗಳನ್ನು ದೂರದ ಸುಬ್ರಹ್ಮಣ್ಯ ದ ಕಾಡಿಗೆ ಬಿಡುವ ಮೂಲಕ ಸಾಮಾಜಿಕ ಸೇವೆಯಲ್ಲಿ ನಿರತರಗಿದ್ದಾರೆ. ಸಾಮೆತಡ್ಕ ನಿವಾಸಿ ಶಬೀರ್ ಮತ್ತು ಹಲಿಮಾಬಿ ದಂಪತಿಯ ಪುತ್ರನಾದ ಪಾಯಿಝ್ ದ್ವಿತೀಯ ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿದ್ದು ಇವಾಗ ವೃತ್ತಿಯಲ್ಲಿ ಪೈಂಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

CATEGORIES
Share This

COMMENTS

Wordpress (0)
Disqus ( )
error: Content is protected !!