ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶ ಸಮಿತಿ ರಚಿಸಲು ಡಿಸೆಂಬರ್ 15 ಕ್ಕೆ ಭಕ್ತಾದಿಗಳ ಸಭೆ.

ಪುತ್ತೂರು : (ಡಿ.13) ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಭರದಿಂದ ಸಾಗುತ್ತಿದ್ದು  ಮುಂಬರುವ ಏಪ್ರಿಲ್ 21 ರಿಂದ 26 ರ ವರೆಗೆ ಬ್ರಹ್ಮಕಲಶೋತ್ಸವನ್ನು ನೆರವೇರಲಿರುವುದು ಅದ್ದರಿಂದ ಶ್ರೀ ದೇವಳದ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲು ದಿನಾಂಕ 15-12-2019 ನೇ ಆದಿತ್ಯವಾರ ದಂದು ಬೆಳಿಗ್ಗೆ ಗಂಟೆ 10.00 ರಿಂದ ಚಿನ್ಮಯೀ ಸಭಾಂಗಣದಲ್ಲಿ ಭಕ್ತಾದಿಗಳ ಸಭೆಯನ್ನು ಕರೆಯಲಾಗಿದೆ.

Advertising
ಈ ಸಭೆಗೆ ಊರಿನ, ಪರವೂರಿನಲ್ಲಿರುವ ಶ್ರೀ ದೇವಿಯ ಭಕ್ತಾದಿಗಳು ಮತ್ತು ಕೋಡಿಂಬಾಡಿ ಗ್ರಾಮದ ಪ್ರತೀ ಮನೆಯಿಂದ ಕನಿಷ್ಠ ಪಕ್ಷ ಒಬ್ಬರಾದರೂ ಕಡ್ಡಾಯವಾಗಿ ಆಗಮಿಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ವ್ಯವಸ್ಥಾಪನಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!