ಆಟವಾಡುತ್ತಿದ್ದ 7ರ ಬಾಲೆಯನ್ನ ಕೊಟ್ಟಿಗೆಗೆ ಹೊತ್ತೊಯ್ದು ರೇಪ್

ದಾವಣಗೆರೆ : (ಡಿ.02) ಮನೆಯಲ್ಲಿ ಆಟವಾಡುತ್ತಿದ್ದ 8 ವರ್ಷದ ಬಾಲಕಿಯನ್ನು ಯುವಕನೊಬ್ಬ ದನದ ಕೊಟ್ಟಿಗೆಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಂಜನ್ (23) ಅತ್ಯಾಚಾರ ಎಸಗಿದ ಯುವಕ. ಆರೋಪಿಯು ಸೋಮವಾರ ಸಂಜೆ ಕೃತ್ಯ ಎಸಗಿದ್ದಾನೆ.

Rape on child

ಬಾಲಕಿ 2ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಸೋಮವಾರ ಸಂಜೆ ಶಾಲೆಯಿಂದ ಮನೆಗೆ ಬಂದಿದ್ದಳು. ಮನೆಯಲ್ಲಿ ಯಾರು ಇಲ್ಲದೆ ಇರುವುದನ್ನು ಅರಿತ ರಂಜನ್ ಬಾಲಕಿಯನ್ನು ಮಾತನಾಡಿಸಿದ್ದಾನೆ. ಬಳಿಕ ಆಕೆಯನ್ನು ದನದ ಕೊಟ್ಟಿಗೆಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಯಾರ ಬಳಿ ಹೇಳಬೇಡ. ಒಂದು ವೇಳೆ ಹೇಳಿದರೆ ನಿಮ್ಮ ತಾಯಿಯನ್ನು ಹೊಡೆಯುತ್ತೇನೆ ಎಂದು ಆರೋಪಿಸಿ ಹೆದರಿಸಿದ್ದ.

Advertising
ರಂಜನ್ ಕೃತ್ಯದಿಂದ ಗಾಬರಿಗೊಂಡ ಬಾಲಕಿ, ಘಟನೆಯನ್ನು ತಾಯಿಯ ಮುಂದೆ ಹೇಳಿಕೊಂಡಿದ್ದಾಳೆ. ಇದರಿಂದ ಆಘಾತಕ್ಕೆ ಒಳಗಾದ ಪೋಷಕರು ಮಗಳನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಆರೋಪಿಯನ್ನು ಬಂಧಿಸಿರುವ ನ್ಯಾಮತಿ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಆರೋಪಿ ರಂಜನ್ ವಿರುದ್ಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

CATEGORIES
Share This

COMMENTS

Wordpress (0)
Disqus ( )
error: Content is protected !!