ತುಳು ಭಾಷೆಯನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆಗ್ರಹ

ಕಾಸರಗೋಡು : (ಡಿ.03) ತುಳು ಭಾಷೆಯನ್ನು ಸಂವಿಧಾನದ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಲು ಕಾಸರಗೋಡು ಸಂಸದರಾದ ಶ್ರೀ ರಾಜ್ ಮೋಹನ್ ಉಣ್ಣಿತ್ತಾನ್ ಲೋಕಸಭೆಯಲ್ಲಿ ಒತ್ತಾಯಿಸಿದರು. ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳು ಮತ್ತು ಕಾಸರಗೋಡು ಜಿಲ್ಲೆಯ ಬಹುತೇಕರು ದ್ರಾವಿಡ ಭಾಷೆಗಳಲ್ಲೊಂದಾದ ತುಳು ಭಾಷಿಕರಾಗಿದ್ದಾರೆ. 2011 ರ ಖಾನೇಶುಮಾರಿ ವರದಿ ಪ್ರಕಾರ ಸುಮಾರು 18,46,427 ಜನರು ತುಳು ಭಾಷಿಕರಾಗಿದ್ದಾರೆ. ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಂಡಿರುವ ಮಣಿಪುರಿ(17,61,079), ಸಂಸ್ಕೃತ (24,821) ಮುಂತಾದ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷಿಕರ ಸಂಖ್ಯೆ ಅಧಿಕವಾಗಿದೆ ಎಂದು ಅವರು ಅಂಕಿ ಅಂಶ ಸಹಿತ ವಿವರಿಸಿದರು.

Kasaragodu

ತುಳು ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಿದಲ್ಲಿ ಸಾಹಿತ್ಯ ಅಕಾಡೆಮಿಯಿಂದ ಅಂಗೀಕಾರ ಲಭಿಸುವುದು ಮಾತ್ರವಲ್ಲದೆ, ಇತರ ಭಾಷೆಗಳಿಗೆ ತುಳು ಸಾಹಿತ್ಯ ಕೃತಿಗಳನ್ನು ಇತರ ಭಾಷೆಗಳಿಗೆ ಅನುವಾದ ಮಾಡಲೂ ಸಾಧ್ಯವಾಗಲಿದೆ. ಸಂಸತ್ ಸದಸ್ಯರು ಮತ್ತು ಶಾಸಕರಿಗೆ ಪಾರ್ಲಿಮೆಂಟ್ ಮತ್ತು ವಿಧಾನಸಭೆಗಳಲ್ಲಿ ತುಳುವಿನಲ್ಲಿ ಪ್ರಶ್ನೆಗಳನ್ನು ಕೇಳಲು ಮತ್ತು ನಾಗರಿಕ ಸೇವಾ ಪರೀಕ್ಷೆಗಳೂ ಸೇರಿದಂತೆ ಅಖಿಲ ಭಾರತ ಮಟ್ಟದ ಪರೀಕ್ಷೆಗಳನ್ನು ತುಳುವಿನಲ್ಲಿ ಬರೆಯಲು ಸಾಧ್ಯವಾಗಲಿದೆಯೆಂದು ಅವರು ವಿವರಿಸಿದರು.

Advertising

ಕೇರಳ ಹಾಗೂ ಕರ್ನಾಟಕದ ತುಳು ಭಾಷಿಕರ ಹಲವು ದಶಕಗಳ ಬೇಡಿಕೆಯನ್ನು ಸಂಸದ ಶ್ರೀ ಉಣ್ಣಿತ್ತಾನ್ ಲೋಕಸಭೆಯಲ್ಲಿ ಮಂಡಿಸಿದರು. 2018 ರಲ್ಲಿ ಯುನೆಸ್ಕೋ ಚೈನಾದ ಚಾಂಗ್ಸಾದಲ್ಲಿ ಆಯೋಜಿಸಿದ್ದ ಯುಯುಲು ಘೋಷಣೆಯ ಕೆಲವು ಆಯ್ದ ಭಾಗಗಳನ್ನು ಓದಿ ಸಂಸದರು ಶೂನ್ಯ ವೇಳೆಯಲ್ಲಿ ತುಳು ಭಾಷೆಗೆ ಅಂಗೀಕಾರಕ್ಕಾಗಿ ಮಾತನಾಡಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!