ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟ : ಸುದ್ದಿ ಬಿಡುಗಡೆ ತಂಡ ಕ್ರಿಕೆಟ್ ನಲ್ಲಿ ಚಾಂಪಿಯನ್

ಮಂಗಳೂರು : (ಡಿ.01) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ದಶಂಬರ್ 1 ರಂದು ಮಂಗಳೂರಿನ ನೆಹರು ಮೈದಾನದ ಬಳಿಯ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾಟದಲ್ಲಿ ಪುತ್ತೂರು ಸುದ್ದಿ ಬಿಡುಗಡೆ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ವಿ4 ಮಂಗಳೂರು ತಂಡವು ದ್ವಿತೀಯ ಸ್ಥಾನ ಗಳಿಸಿದೆ. ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ನ ಸಹಕಾರದಿಂದ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಹಲವು ಸ್ಪರ್ಧೆಗಳು ನಡೆದಿದ್ದು ಕ್ರಿಕೆಟ್ ಪಂದ್ಯಾ ಕೂಟದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿತ್ತು.

Suddi

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿ ಪ್ರಸಾದ್ ಶೆಟ್ಟಿ, ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಾನೀಕ ಸಂಪಾದಕ ಯು.ಕೆ ಕುಮಾರನಾಥ್, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಮತ್ತು ಉದ್ಯಮಿ ದಿಲ್ ರಾಜ್ ಆಳ್ವ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು. ದಕ್ಷಿಣಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಪದಾಧಿಕಾರಿಗಳಾದ ಭಾಸ್ಕರ್ ರೈ ಕಟ್ಟ, ಆರ್ ಸಿ ಭಟ್, ದಯಾ ಕುಕ್ಕಾಜೆ, ಜಿತೇಂದ್ರ ಕುಂದೇಶ್ವರ, ಸುರೇಶ್ ಡಿ. ಪಳ್ಳಿ ಮತ್ತಿತರರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.

Advertising
ಪ್ರಥಮ ಸುತ್ತಿನ ಪಂದ್ಯಾಟದಲ್ಲಿ ಮಂಗಳೂರು ವಾರಿಯರ್ಸ್, ದ್ದಿತೀಯ ಸುತ್ತಿನಲ್ಲಿ ಹೊಸ ದಿಗಂತ ತಂಡ, ಸೆಮಿ ಪೈನಲ್ ನಲ್ಲಿ ನಮ್ಮ ಕುಡ್ಲ ಲೈವ್ ತಂಡ ಮತ್ತು ಪೈನಲ್ ಪಂದ್ಯಾಟದಲ್ಲಿ ವಿ4 ತಂಡವನ್ನು ಸೋಲಿಸಿದ ಪುತ್ತೂರು ಸುದ್ದಿ ಬಿಡುಗಡೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ವಿ4 ಮಂಗಳೂರು ತಂಡ ರನ್ನರ್ಸ್ ಪ್ರಶಸ್ತಿಗೆ ಭಾಜನವಾಯಿತು. ಸುದ್ದಿ ಬಿಡುಗಡೆ ತಂಡದಲ್ಲಿ ಶೋಭರಾಜ್ ಉರ್ಲಾಂಡಿ, ಶಿವಕುಮಾರ್ ಆರ್ಲಪದವು ಮತ್ತು ಯೂಸುಫ್ ರೆಂಜಲಾಡಿ ಅಲ್ ರೌಂಡ್ ಆಟ ಪ್ರದರ್ಶಿಸಿದರು. ಉಳಿದಂತೆ ಸುದ್ದಿ ತಂಡದಲ್ಲಿ ಸಂತೋಷ್ ಕುಮಾರ್ ಶಾಂತಿನಗರ (ನಾಯಕ), ಫಾರೂಕ್ ಶೇಖ್ ಮುಕ್ವೆ (ಉಪನಾಯಕ), ಲೋಕೇಶ್ ಬನ್ನೂರು, ರಮೇಶ್ ಬೆಳ್ಳಿಪ್ಪಾಡಿ, ಶ್ರೇಯಶ್ ಸೂತ್ರಬೆಟ್ಟು, ಅಭಿಷೇಕ್, ಸುಮನ್ ರಾಜ್ ರೆನ್ಯ, ಮತ್ತು ಪ್ರಶಾಂತ್ ಮಿತ್ತಡ್ಕ ಸಹ ಆಟಗಾರಾಗಿದ್ದರು. ಸುದ್ದಿ ಬಿಡುಗಡೆಯ ಸಿ.ಇ.ಒ ಸೃಜನ್ ಊರುಬೈಲು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!