ಜಿಲ್ಲಾ ದಲಿತ ಸೇವಾ ಸಮಿತಿ ಮಾಸಿಕ ಸಭೆ ಪತ್ರಕರ್ತ ಸಂಘದ ಅಧ್ಯಕ್ಷ ಶಂಶುದ್ದಿನ್ ಸಂಪ್ಯರಿಗೆ ಸನ್ಮಾನ.

ಪುತ್ತೂರು : (ಡಿ.02) ದಕ್ಷಿಣಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.)ವಿಟ್ಲ ಇದರ ಪುತ್ತೂರು ಘಟಕ ದ ಮಾಸಿಕ ಸಭೆಯು ಪುತ್ತೂರು ತಾಲೂಕು ಘಟಕ ದ ಅಧ್ಯಕ್ಷರಾದ ಶ್ರೀ ಅಣ್ಣಪ್ಪ ಕಾರೆಕ್ಕಾಡು ರವರ ಅಧ್ಯಕ್ಷತೆಯಲ್ಲಿ ಸುದ್ದಿ ಸೆಂಟರ್ ಹಾಲ್ ನಲ್ಲಿ ಡಿಸೆಂಬರ್ 1 ರಂದು ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಗದೀಶ್ ಕಜೆ ಮಾತನಾಡಿ ಪ್ರಪಂಚದಾದ್ಯಂತ ಅಂಬೇಡ್ಕರ್ ರವರ ಬಗ್ಗೆ ಜನ ತಿಳಿದುಕೊಂಡಿದ್ದು ಹಾಗಾಗಿ ಅಂಬೇಡ್ಕರ್ ರವರ ಜೀವನದ ಬಗ್ಗೆ ಮಾತಾಡುವ ಬದಲು ಸಂವಿಧಾನ ದ ಆಶಯವನ್ನು ಜನರಿಗೆ ತಿಳಿಯಪಡಿಸಬೇಕು.

Jagadeesha Kaje

ಚಾಣಕ್ಯನ ನೀತಿಯಂತೆ ಹುಟ್ಟಿನಿಂದ ಯಾರು ಶ್ರೇಷ್ಠರಾಗುವುದಿಲ್ಲ ಬದಲಾಗಿ ತಾನು ಮಾಡುವ ಕೆಲಸ ಕಾರ್ಯಗಳಿಂದಾಗಿ ಜನರು ಶ್ರೇಷ್ಠರಾಗುತ್ತಾರೆ ಅಂತಹ ಸಾಲಿನಲ್ಲಿ ಅಂಬೇಡ್ಕರ್ ರವರು ಮೊದಲಿಗರು ಎಂದರು. ಕರಾವಳಿ ಜಿಲ್ಲೆಯಾದ್ಯಂತ ಸಂಘಟನೆಯಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿ ಅಗ್ರ ಸ್ಥಾನದಲ್ಲಿ ಇದ್ದರೂ ಮೇಲ್ಜಾತಿಯ ಜನ ನೀಡುವ ಹಣಕ್ಕಾಗಿ ದಲಿತರಿಗೆ ಅನ್ಯಾಯ ಮಾಡುತ್ತಿರುವುದು ಸಂಘಟನೆಗೆ ಕಪ್ಪು ಚುಕ್ಕೆಯಾಗಿದೆ, ದೇಶದಾದ್ಯಂತ ಸಂವಿಧಾನ ವಿರೋಧಿ ಹೇಳಿಕೆ ಮತ್ತು ಬದಲಾವಣೆಯ ಬಗ್ಗೆ ಕೂಗು ಈ ದೇಶದ ಕಾನೂನಿಗೆ ಮಾಡುವ ಅಪಮಾನ ದೇಶದ ಪ್ರತಿಯೊಂದು ಸರಕಾರಿ ಕಛೇರಿ, ಕೋರ್ಟ್ ಸಂವಿಧಾನ ದ ಆಶಯದಂತೆ ನಡೆಯುತ್ತಿದೆ ಆದರೆ ಕೊರ್ಟ್ ಕಛೇರಿ ನೀಡುವ ಆದೇಶವನ್ನು ಮೀರಿ ಪ್ರತಿಭಟನೆ, ಅಕ್ರಮ ಜಾಗ ಒತ್ತುವರಿ, ದೌರ್ಜನ್ಯ ಮಾಡುವ ದಲಿತ ಮುಖಂಡರೇ ಸಂವಿಧಾನ ದ ವಿರೋಧಿಗಳಲ್ಲಿ ಮೊದಲಿಗರು ಎಂದರು.

Advertising

ಈ ದೇಶದ ಪ್ರತಿಯೊಂದು ಹಳ್ಳಿ, ಪಟ್ಟಣಗಳಲ್ಲಿ ಯಾವುದಾದರೂ ಪುತ್ಥಳಿ ಇದ್ದರೆ ಅದು ಅಂಬೇಡ್ಕರ್ ರವರದ್ದು ಮಾತ್ರ. ನಮ್ಮ ನಾಯಕರು ವಿದೇಶಗಳಲ್ಲಿ ಭಾರತದ ಲಿಖಿತ ಸಂವಿಧಾನ ದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾರೆ ಆದರೆ ಇಲ್ಲಿ ರಾಮಾಯಣ, ಮಹಾಭಾರತದ ಬಗ್ಗೆ ಚರ್ಚಿಸುತ್ತಾರೆ. ದಲಿತ ಸಂಘಟನೆಗಳು ಮತ್ತು ಮುಖಂಡರು ಹಣಕ್ಕಾಗಿ ಕೆಲಸ ಮಾಡದೆ ಬಡವರ ಶ್ರೇಯೋಭಿವೃಧ್ಧಿಗಾಗಿ ಕೆಲಸ ಮಾಡಿ ಸಂಘಟನೆಯ ಮೇಲಿರುವ ಕಪ್ಪು ಚುಕ್ಕೆಯನ್ನು ಹೋಗಲಾಡಿಸುವಂತಾಗಲಿ ಎಂದು ಹಾರೈಸಿದರು.

Shamshuddin sampya

ಕಾರ್ಯಕ್ರಮದಲ್ಲಿ ಇತ್ತೀಚಿಗೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶಂಶುದ್ದಿನ್ ಸಂಪ್ಯ ರವರನ್ನು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಸನ್ಮಾನಿಸಿದರು ಸನ್ಮಾನ ಸ್ವೀಕರಿಸಿ ಮಾತನಾಡಿದ ಶಂಶುದ್ದಿನ್ ಸಂಪ್ಯ ರವರು ತನ್ನ ಬಾಲ್ಯದ ನೆನಪುಗಳನ್ನು ಮೇಲುಕು ಹಾಕಿದರಲ್ಲದೆ ದಲಿತರೋಂದಿಗೆ ತನಗಿರುವ ಬಾಂಧವ್ಯವನ್ನು, ದಲಿತರ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಮಾತನಾಡಿ ಸಂಘಟನೆಗೆ ಶುಭ ಕೋರಿದರು.

Shamshuddin sampya
ದಲಿತ ಸೇವಾ ಸಮಿತಿ ಯ ಕ್ರೀಡಾ ಕಾರ್ಯದರ್ಶಿ ಅಖೀಲೇಶ್ ತೆಂಕಿಲ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮೀಸಲಾತಿಯನ್ನು ತೆಗೆದು ಸಮಾನತೆ ತರಲು ಚರ್ಚೆಗಳು ನಡೆಯುತ್ತಿದ್ದು ಆದರೇ ಜಾತಿ ಸಮಾನತೆಗೆ ಯಾರೂ ಚರ್ಚಿಸದೆ ಇರುವುದು ವಿಷಾದಕರ ಇವತ್ತು ಜನ ಕೋರಗಜ್ಜನಿಗೆ ಬಂಗಾರವನ್ನು ಅರ್ಪಿಸುವಷ್ಟು ಉದಾರಿಗಳಾಗಿದ್ದರೆ ಆದರೆ ಕೋರಗ ಜನಾಂಗದವರು ಇನ್ನೂ ಕಾಡನ್ನು ಆಶ್ರಯಿಸಿರುವುದು ವಿಷಾದನೀಯ ಎಂದರು.

Dss

ಕಾರ್ಯಕ್ರಮದಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಯು ವಿಟ್ಲ, ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಮಹಿಳಾ ಘಟಕದ ಅಧ್ಯಕ್ಷೆ ಸುನಂದ ತೆಂಕಿಲ ಪ್ರಾಸ್ತಾವಿಕವಾಗಿ ಮಾತನಾಡಿ ಶುಭ ಹಾರೈಸಿದರು. ಜಿಲ್ಲಾ ದಲಿತ್ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ಶ್ರಿ ರಾಜು ಹೊಸ್ಮಠ ಕಾರ್ಯಕ್ರಮ ನಿರ್ವಹಿಸಿದರು ತಾಲೂಕು ಉಪಾಧ್ಯಕ್ಷ ಮನೋಹರ್ ಕೋಡಿಜಾಲು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನೂರಾರು ಮಂದಿ ದಲಿತ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.

CATEGORIES
Share This

COMMENTS

Wordpress (0)
Disqus (0 )
error: Content is protected !!