ಯುವಶಕ್ತಿ ಗೆಳೆಯರ ಬಳಗ(ರಿ.) ಅಧ್ಯಕ್ಷರಾಗಿ ಯೋಗೀಶ್ ಸಾಮಾನಿ ಪುನರಾಯ್ಕೆ.

ಪುತ್ತೂರು : (ಡಿ.01) ಯುವಶಕ್ತಿ ಗೆಳೆಯರ ಬಳಗ (ರಿ.) ಕೋಡಿಂಬಾಡಿ ಇದರ 2018-2019 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಗೌರವಾಧ್ಯಕ್ಷರಾದ ರಮೇಶ್ ನಾಯಕ್ ನಿಡ್ಯ ಇವರ ಅಧ್ಯತೆಯಲ್ಲಿ ಇತ್ತೀಚೆಗೆ ‍ಕೋಡಿಂಬಾಡಿಯ ಶಿವ ಕಾಂಪ್ಲೆಕ್ಸ್ ನ ಗಣೇಶ್ ಡ್ರೆಸ್ಸಸ್ ನಲ್ಲಿ ನಡೆಯಿತು. ಬಳಗದ ಅಧ್ಯಕ್ಷರಾದ ಯೋಗೀಶ್.ಯಸ್.ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಶೆಟ್ಟಿ ಪಿಜಿನಡ್ಕ 2018-19 ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿ, ಕೋಶಾಧಿಕಾರಿ ಮಾಧವ ಗೌಡ ಬರೆಮೇಲು ಇವರು ಆಯ-ವ್ಯಯಗಳ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು. ಸದಸ್ಯರುಗಳು ತಮ್ಮ ಚಪ್ಪಾಳೆಯ ಮೂಲಕ ವರದಿ ಮತ್ತು ಲೆಕ್ಕಪತ್ರವನ್ನು ಅಂಗೀಕರಿಸಿದರು.

ಯೋಗಿಶ್ ಸಾಮಾನಿ ಮಠಂತಬೆಟ್ಟು
ನಂತರ ನಡೆದ ಸಭೆಯಲ್ಲಿ 2019-20 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ರಮೇಶ್ ನಾಯಕ್ ನಿಡ್ಯ, ಅಧ್ಯಕ್ಷರಾಗಿ ಯೋಗೀಶ್.ಯಸ್. ಸಾಮಾನಿ ಸಂಪಿಗೆದಡಿ-ಮಠಂತಬೆಟ್ಟು, ಕಾರ್ಯದರ್ಶಿಯಾಗಿ ಮಾಧವ ಗೌಡ ಬರೆಮೇಲು,

ಮಾಧವ ಗೌಡ

ಕೋಶಾಧಿಕಾರಿಯಾಗಿ ಶ್ರೀನಿವಾಸ ನಾಯ್ಕ ದಾಸಕೋಡಿ, ಉಪಾಧ್ಯಕ್ಷರಾಗಿ ಯುವರಾಜ ಪಲ್ಲತ್ತಾರು, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ಪಿಜಿನಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಭಾಕರ ಸಾಮಾನಿ ‘ಪ್ರಭಾವಿ’ ಮಠಂತಬೆಟ್ಟು, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಸತೀಶ್ ಎ.ಎಸ್ ಶಾಂತಿನಗರ, ಸಂಘಟನಾ ಕಾರ್ಯದರ್ಶಿಗಳಾಗಿ ವಿಜಯ ನಾಯ್ಕ ಲಿಂಗಪಾಲು, ದೀಪಕ್ ಮಣಿಯಾಣಿ ನಿಡ್ಯ ಇವರುಗಳನ್ನು ಆಯ್ಕೆಮಾಡಲಾಯಿತು.

CATEGORIES
Share This

COMMENTS

Wordpress (0)
Disqus ( )
error: Content is protected !!