ಸ್ಯಾಕ್ಸೋಫೋನ್ ವಾದಕ ಡಾ. ಕೃಷ್ಣಪ್ರಸಾದ್ ದೇವಾಡಿಗರಿಗೆ ಪಣೋಲಿಬೈಲು ಕ್ಷೇತ್ರದಲ್ಲಿ ಸನ್ಮಾನ

ಬಂಟ್ವಾಳ : (ನ.23) ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನ ಸಜಿಪ ಮೂಡ ಬಂಟ್ವಾಳ ತಾಲೂಕು ಇದರ ವರ್ಷಾವಧಿ ಕೋಲದ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಉಪ್ಪಿನಂಗಡಿಯ ಖ್ಯಾತ ಸ್ಯಾಕ್ಸೋಫೋನ್ ವಾದಕ ಡಾ.ಕೃಷ್ಣಪ್ರಸಾದ್ ದೇವಾಡಿಗರಿಂದ ಸ್ಯಾಕ್ಸೋಫೋನ್ ವಾದನವು ನಡೆಯಿತು.

Saksophone

ನಂತರ ಕೃಷ್ಣಪ್ರಸಾದ್ ದೇವಾಡಿಗರನ್ನು ಸನ್ಮಾನಿಸಲಾಯಿತು. ಕೃಷ್ಣಪ್ರಸಾದ್ ದೇವಾಡಿಗರು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಸ್ಯಾಕ್ಸೋಫೋನ್ ವಾದಕರಾಗಿ ಕೆಲಸ ನಿರ್ವಹಿಸುತ್ತಿರುವುದಲ್ಲದೆ, ಇತ್ತೀಚಿಗೆ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಕೂಡ ಸ್ಯಾಕ್ಸೋಫೋನ್ ವಾದನ ನಡೆಸಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!