ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದಿಂದ ಉಳ್ಳತ್ತೋಡಿ ದೇವಾಲಯದಲ್ಲಿ ಶ್ರಮದಾನ

ಪುತ್ತೂರು : (ನ.24) ಶ್ರಮಜೀವಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣಗಾರರ ಸಂಘ ಉಪ್ಪಿನಂಗಡಿ ವಲಯ ಇದರ ವತಿಯಿಂದ ಜೀರ್ಣೋದ್ಧಾರಗೊಳ್ಳುತ್ತಿರುವ ಹಿರೇಬಂಡಾಡಿ ಗ್ರಾಮದ ಉಳ್ಳತ್ತೋಡಿ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರಮದಾನ ಕಾರ್ಯವು ನಡೆಯಿತು.

Workers association

ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಮಹಾಲಿಂಗ ಕಜೆಕ್ಕಾರು, ರಾಮಣ್ಣ ಗೌಡ ಹಿರೇಬಂಡಾಡಿ, ಭಾರತಿ ಕಜೆಕ್ಕಾರು, ವಿಠಲ ಪೂಜಾರಿ ರಾಮಕುಂಜ, ದೇವಪ್ಪ ಬಜತ್ತೂರು, ಕೊರಗಪ್ಪ ಅಗರಿ, ಸದಸ್ಯರಾದ ಕೊರಗಪ್ಪ ವಳಾಲು , ರವಿ ಕಜೆಕ್ಕಾರು, ಶಾಂತಪ್ಪ ಶೆಟ್ಟಿ ಬೊಳ್ಳಾವು, ನಾಣ್ಯಪ್ಪ ಗೌಡ ಪುಳಿತ್ತಡಿ, ಅನಿಲ್ ರಾಮನಗರ, ಸೀಮ ರಾಮನಗರ, ಗೀತಾ ಅತ್ತಾಜೆ, ಪಿ.ಸಿ ಲಲಿತಾ ಹರಿನಗರ, ಶೇಖರ ಕಾಪು, ಹೊನ್ನಪ್ಪ ಗೌಡ ವರೆಕ್ಕ, ಕರಿಯಪ್ಪ ಗೌಡ ವರೆಕ್ಕ ಸೇರಿದಂತೆ ನೂರಾರು ಮಂದಿ ಇದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!