ಕುಂಬ್ರ ಮಯ್ಯತ್ ಪರಿಪಾಲನ ಶೆಡ್ ಹಾಗೂ ರೇಸ್ಕೂ ಸಲಕರಣೆಗಳ ಲೋಕಾರ್ಪಣೆ

ಪುತ್ತೂರು : (ನ.24) ಎಸ್.ಡಿ.ಪಿ.ಐ ಅಭಿಮಾನಿ ಬಳಗ ಪರ್ಪುಂಜ ಇದರ ವತಿಯಿಂದ ಮಯ್ಯತ್ ಪರಿಪಾಲನೆಗೆ ಬೇಕಾದ ಶೆಡ್ ಹಾಗು ಖಬರ್ ತೋಡುವ ಪರಿಕರಗಳ ಲೋಕಾರ್ಪಣೆ ಕಾರ್ಯಕ್ರಮ ಪರ್ಪುಂಜದಲ್ಲಿ ಇಂದು ಸಂಜೆ ನಡೆಯಿತು.

Sdpi
ಕಾರ್ಯಕ್ರಮದಲ್ಲಿ ಮಯ್ಯತ್ ಶೆಡ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅಬೂ ನಜಾ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಸಾಮಾಜಿಕ ಸಾಮುದಾಯಿಕ ಸೇವೆ ಅದು ಅಲ್ಲಾಹನ ಪ್ರವಾದಿಯ ಸುನ್ನತ್ತಾಗಿದೆ ಯುವಕರ ಈ ರೀತಿಯ ಸೇವೆ ಅದು ಖಂಡಿತವಾಗಿಯೂ ಅಪಾರ ಪ್ರತಿಫಲ ಉಳ್ಳದ್ದಾಗಿದೆ ಎಂದು ಹೇಳಿದರು.

Advertising

ಮುಖ್ಯ ಅತಿಥಿಯಾಗಿ ಮಾತನಾಡಿದ ಎಸ್. ಡಿ. ಟಿ. ಯು ಜಿಲ್ಲಾ ಅಧ್ಯಕ್ಷರಾದ ಜಾಬಿರ್ ಅರಿಯಡ್ಕ ಮಾತನಾಡಿ ಎಲ್ಲಾರನ್ನು ಒಗ್ಗೂಡಿಸಿ ಸಾಮಾಜಿಕ ಕಾರ್ಯಗಳನ್ನು ನಡೆಸಿದರೆ ಒಂದು ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಆ ನಿಟ್ಟಿನಲ್ಲಿ ಯುವಕರ ಈ ಕಾರ್ಯ ಬಹಳ ಶ್ಲ್ಯಾಘನೀಯ ಎಂದರು.

Sdpi
ಮುಖ್ಯ ಅತಿಥಿ ಎಸ್.ಡಿ.ಪಿ.ಐ ಪುತ್ತೂರು ವಿಧಾನ ಸಭಾ ಸಮಿತಿಯ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಸಾಗರ್ ಮಾತನಾಡಿ ಯುವಕರ ಈ ಒಂದು ಸಾಮಾಜಿಕ ಸೇವೆ ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೂ ತಲಪುವಂತಾಗಲಿ ಎಂದು ಹೇಳಿ ಶುಭಹಾರೈಸಿದರು. ಸಮಾರಂಭದ ವೇದಿಕೆಯಲ್ಲಿ ಪರ್ಪುಂಜ ಜುಮಾ ಮಸ್ಜಿದ್ ಅಧ್ಯಕ್ಷರಾದ ಶರೀಫ್ ಹಾಜಿ, ಅಶ್ರಫ್ ಬಾವ ತಂಙಳ್ ಪರ್ಪುಂಜ , ಎಸ್. ಡಿ. ಪಿ. ಐ ಕುಂಬ್ರ ವಲಯ ಅಧ್ಯಕ್ಷರಾದ ಖಾದರ್ ಮಾಡವು ಹಾಗು ಉಪಾಧ್ಯಕ್ಷ ಎಸ್ ಎಮ್ ಮೊಹಮ್ಮದ್ ಕುಂಬ್ರ ಉಪಸ್ಥಿತರಿದ್ದರು.

Advertising

ಎಸ್.ಡಿ.ಪಿ.ಐ ಒಳಮೊಗರು ಗ್ರಾಮ ಸಮಿತಿ ಅಧ್ಯಕ್ಷ ಫಾರೂಕ್ ಪುರ್ಪುಂಜ ಸೇರಿದ ಎಲ್ಲಾರನ್ನು ಸ್ವಾಗತಿಸಿದರು. ಊರಿನ ಹಾಗೂ ಜಮಾತಿನ ಹಿರಿಯರು ಹಾಗು ಎಸ್.ಡಿ.ಪಿ.ಐ ಕಾರ್ಯಕರ್ತರು, ಹಿತೈಷಿಗಳು ಪಾಲ್ಗೊಂಡಿದ್ದರು. ವಲಯ ಕಾರ್ಯದರ್ಶಿ ನಝೀರ್ ಎಸ್ ಪಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!