ಶಾಸಕರ ಕೊಲೆ ಯತ್ನ ಪ್ರಕರಣವನ್ನು ರಾಜಕೀಯಗೊಳಿಸದಿರಿ : ರಾಜಕೀಯ ಪಕ್ಷಗಳಿಗೆ ಎಸ್‍ಡಿಪಿಐ ಕರೆ

ಮೈಸೂರು : (ನ.20) ದಿನಾಂಕ 17 ನವೆಂಬರ್ 2019ರ ರಾತ್ರಿ ಮದುವೆ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವರು, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಅಮಾನವೀಯ ಹತ್ಯಾ ಯತ್ನವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ಪಕ್ಷವು ಕಠಿಣ ಶಬ್ದಗಳಿಂದ ಖಂಡಿಸುತ್ತದೆ. ಸಮಾಜ ಘಾತಕ ಕೆಲಸವನ್ನು ಯಾರು ಮಾಡಿದರೂ ಅದು ಅಕ್ಷಮ್ಯ, ಶಿಕ್ಷಾರ್ಹ ಮತ್ತು ಒಪ್ಪಲು ಸಾಧ್ಯವಿಲ್ಲ ಎಂದು ಎಸ್‍ಡಿಪಿಐ ಹೇಳಿದೆ.

Sdpi

ರಾಜ್ಯದ ಒಬ್ಬ ಚುನಾಯಿತ ಶಾಸಕನ ಮೇಲೆ ಸಾರ್ವಜನಿಕರ ಸಮ್ಮುಖದಲ್ಲೇ ದಾಳಿ ನಡೆಸಿರುವ ಈ ಘಟನೆಯು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಕೃತ್ಯಗಳು ಸಮಾಜದಲ್ಲಿ ಅಶಾಂತಿ, ಆತಂಕಗಳನ್ನು ಸೃಷ್ಟಿಸುತ್ತದೆ. ಘಟನೆಗೆ ಕಾರಣವಾದ ದಾಳಿಕೋರನನ್ನು ಬಂಧಿಸಿರುವ ಪೊಲೀಸರನ್ನು ಎಸ್‍ಡಿಪಿಐ ಪಕ್ಷವು ಅಭಿನಂದಿಸುತ್ತದೆ ಮತ್ತು ಘಟನೆಯ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಿ ಘಟನೆಯ ಹಿಂದಿರುವ ನೈಜ ಕಾರಣಗಳನ್ನು ಬಹಿರಂಗಪಡಿಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಎಸ್‍ಡಿಪಿಐ ಈ ಪತ್ರಿಕಾಗೋಷ್ಠಿಯ ಮೂಲಕ ಪೊಲೀಸ್ ಇಲಾಖೆಯನ್ನು ಆಗ್ರಹಿಸುತ್ತದೆ. ಈ ಘಟನೆಗೆ ಸಂಬಂಧಿಸಿ ಪೊಲೀಸ್ ಇಲಾಖೆಯು ನಿಷ್ಪಕ್ಷವಾಗಿ ಮತ್ತು ನ್ಯಾಯಯುತವಾಗಿ ತನಿಖೆಯನ್ನು ನಡೆಸಿ ಯಾವುದೇ ಒಬ್ಬ ಅಮಾಯಕನನ್ನು ಬಂಧಿಸಿ ಅನ್ಯಾಯವಾಗಿ ಬಳಸಿಕೊಳ್ಳುವುದಿಲ್ಲ ಎಂಬ ಸಂಪೂರ್ಣ ಭರವಸೆ ಹಾಗೂ ನಂಬಿಕೆಯಿದೆ.

ಇದೀಗಾಗಲೇ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆಗೊಳಪಡಿಸಿದ್ದು, ತನಿಖೆಯ ಮೇಲೆ ಪ್ರಭಾವ ಬೀರುವ ಮತ್ತು ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರದ ಹೇಳಿಕೆಗಳು ಸಮಾಜದ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀಳಲಿದೆ ಎಂಬ ಅಲ್ಪ ಜ್ಞಾನವನ್ನಾದರೂ ರಾಜಕೀಯ ನಾಯಕರು ತಿಳಿದುಕೊಂಡು ವರ್ತಿಸಬೇಕೆಂದು ಎಸ್‍ಡಿಪಿಐ ಹೇಳಿದೆ. ಯಾವುದೇ ಘಟನೆಗಳು ಸಂಭವಿಸಿದರೂ ಅದನ್ನು ರಾಜಕೀಯಗೊಳಿಸಿ ದಿಕ್ಕು ತಪ್ಪಿಸುವುದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಹಳೆಯ ಚಾಳಿಯಾಗಿದೆ.

Advertising

ಆದರೆ, ವಿಪರ್ಯಾಸವೆಂಬಂತೆ ಈ ಘಟನೆಯನ್ನು ರಾಜಕೀಯಗೊಳಿಸುವ ದುರುದ್ದೇಶದಿಂದ ಕೆಲ ನಾಯಕರ ಹೇಳಿಕೆಗಳು ಬೇಜವಾಬ್ದಾರಿತನಕ್ಕೆ ಹಿಡಿದ ಕೈಕನ್ನಡಿಯಾಗಿದೆ ಮತ್ತು ಅಸತ್ಯದಿಂದ ಕೂಡಿದೆ. ಇದನ್ನೂ ತೀಕ್ಷ್ಣ ಮಾತುಗಳಿಂದ ಎಸ್‍ಡಿಪಿಐ ಖಂಡಿಸುತ್ತದೆ. ಪ್ರತಿಯೊಂದು ಘಟನೆಗಳನ್ನು ತಮ್ಮ ಮೂಗಿನ ನೇರಕ್ಕೆ ಬಳಸಿಕೊಂಡು ಅದನ್ನು ರಾಜಕೀಯಗೊಳಿಸಿ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಹುನ್ನಾರವನ್ನು ಕೈಬಿಟ್ಟು, ಪ್ರಬುದ್ಧರಾಗಿ ಮತ್ತು ತಮ್ಮ ಜವಾಬ್ದಾರಿಯನ್ನು ಅರಿತು ಹೇಳಿಕೆ ನೀಡಬೇಕು. ಆ ಹೇಳಿಕೆಯಲ್ಲಿ ಸತ್ಯತೆ ಮತ್ತು ಪ್ರಾಮಾಣಿಕತೆಯೂ ಇರಬೇಕು.

ಅದೇ ರೀತಿ ಈ ಘಟನೆಯನ್ನು ಎಸ್‍ಡಿಪಿಐ ಪಕ್ಷದ ಜತೆಗೆ ತಳುಕು ಹಾಕುತ್ತಿರುವ ಕುತ್ಸಿತ ಪ್ರಯತ್ನವನ್ನೂ ನಾವು ಗಮನಿಸುತ್ತಿದ್ದೇವೆ. ಈ ಘಟನೆಗೂ ಎಸ್‍ಡಿಪಿಐ ಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇವೆ. ಎಸ್‍ಡಿಪಿಐ ಪಕ್ಷವು ಜನಪರವಾಗಿ ಮತ್ತು ಎಲ್ಲರಿಗೂ ಸಮಾನ ಅವಕಾಶಗಳಿರುವ ಭದ್ರತೆಯ ಸಮಾಜ ನಿರ್ಮಾಣದ ಕನಸುಗಳೊಂದಿಗೆ, ದೇಶವ್ಯಾಪಿ ಪಡೆಯುತ್ತಿರುವ ಭಾರೀ ಜನಬೆಂಬಲವನ್ನು ಮತ್ತು ಜನತೆ ಹೃದಯ ಪೂರ್ವಕವಾಗಿ ಸ್ವೀಕರಿಸುತ್ತಿದೆಯಲ್ಲದೆ ದೇಶದ ಜನತೆಗೆ ರಾಜಕೀಯ ಪ್ರಬುದ್ಧತೆಯ ಜೊತೆಗೆ ಹಿಂದುಳಿದಲ್ಪಟ್ಟಿರುವ ಜನತೆಯನ್ನು ರಾಜಕೀಯವಾಗಿ ಸಬಲೀಕರಣಗೊಳಿಸುವ, ಸರ್ವರಿಗೂ ಶಿಕ್ಷಣ ನೀಡಿ ಸಮಾಜವನ್ನು ತಿದ್ದುವ ದೇಶದಲ್ಲೇ ಪರ್ಯಾಯ ರಾಜಕೀಯ ಪಕ್ಷವಾಗಿ ಎಸ್‍ಡಿಪಿಐ ಬೆಳೆಯುತ್ತಿದೆ. ಪಕ್ಷದ ಈ ಬೆಳವಣಿಗೆಯನ್ನು ಸಹಿಸಲಾಗದೆ ನಿರಾಧಾರ, ಇಲ್ಲ ಸಲ್ಲದ ಮತ್ತು ಸತ್ಯಕ್ಕೆ ದೂರವಾದ ಆರೋಪಗಳನ್ನು ಹೊರಿಸಿ ಪಕ್ಷದ ಮೇಲೆ ಕಪ್ಪು ಚುಕ್ಕೆ ಬರುವಂತೆ ಮಾಡುವ ಷಡ್ಯಂತ್ರ ಹಾಗೂ ಧಮನವಾಗಿದೆ ಭಾಗವಾಗಿದೆ ಈ ಎಲ್ಲಾ ಆರೋಪಗಳು.

Advertising

ಡಿಸೆಂಬರ್ 05 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಉಪಚನಾವಣೆಗೆ ಇದೀಗಾಗಲೇ ಪಕ್ಷದಿಂದ ಹುಣಸೂರು ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಿಂದ ಎಸ್‍ಡಿಪಿಐ ಅಭ್ಯರ್ಥಿಗಳು ಕಣದಲ್ಲಿದ್ದು, ಎರಡೂ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಸಿಗುತ್ತಿರುವ ಭಾರೀ ಜನಬೆಂಬಲವು ಇಲ್ಲಿನ ರಾಜಕೀಯ ಪಕ್ಷಗಳ ಕಣ್ಣು ಕೆಂಪಾಗಿಸಿದೆ. ಸಣ್ಣ ಅವಧಿಯಲ್ಲೇ ಪಕ್ಷವು ಜನತೆಯ ಹೃದಯಲ್ಲಿ ಬೆಳೆಯುತ್ತಿರುವುದನ್ನು ಸಹಿಸಿ ಕೊಳ್ಳಲಾರದೆ ಇಲ್ಲಿನ ರಾಜಕೀಯ ಪಕ್ಷಗಳಿಗೆ ಮತ್ತು ಅದರ ನಾಯಕರಿಗೆ ನುಂಗಲಾರದ ತುಪ್ಪವಾಗಿದೆ ಎಂಬುವುದು ಸತ್ಯ.

ಅದೇ ರೀತಿ ಕೆಲ ಮಾಧ್ಯಮಗಳೂ ತಮಗಿಷ್ಟ ಬಂದಂತೆ, ತನಿಖಾ ಹಂತದಲ್ಲಿರುವಾಗ ತನಿಖೆಯ ದಿಕ್ಕು ತಪ್ಪಿಸುವಂತೆ ಮಾಡಿರುವ ವರದಿಗಳ ಬಗ್ಗೆ ಮತ್ತು ಅಸತ್ಯದೊಂದಿಗೆ ಅಪಪ್ರಚಾರವನ್ನು ನಡೆಸಿರುವುದನ್ನು ಎಸ್‍ಡಿಪಿಐ ಪಕ್ಷ ಬಲವಾಗಿ ಖಂಡಿಸುತ್ತದೆ. ಇದು ಪತ್ರಿಕಾ ಧರ್ಮಕ್ಕೆ ಮತ್ತು ಪತ್ರಿಕೋದ್ಯಮಕ್ಕೆ ಮಾಡುವ ಅವಮಾನವಾಗಿದೆ. ನ್ಯಾಯಯುತವಾಗಿ, ಜವಾಬ್ದಾರಿಯನ್ನು ಅರಿತು ಪತ್ರಿಕೋದ್ಯಮಕ್ಕೆ ಚ್ಯುತಿ ಬಾರದಂತೆ ವರದಿ ಮಾಡುವಂತೆ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.

ರಾಜಕೀಯ ಪಕ್ಷಗಳ ಚುನಾವಣಾ ಕಾರ್ಯಕ್ರಮ ಅಥವಾ ಪ್ರಚಾರ ಸಂದರ್ಭಗಳಲ್ಲಿ ಸಾರ್ವಜನಿಕರು ಭಾಗವಹಿಸುತ್ತಾರೆ. ಎಂದ ಮಾತ್ರಕ್ಕೆ ಅವರು ಎಂದೆಂದೂ ಅ ಪಕ್ಷಗಳ ಕಾರ್ಯಕರ್ತರು ಅನ್ನಬೇಕಿಲ್ಲ. ಅವರು ಮಾಡಿದ ಪ್ರತಿಯೊಂದು ಕೃತ್ಯಗಳಿಗೆ ಪಕ್ಷಗಳು ಹೊಣೆಯಲ್ಲ ಎಂದು ಎಸ್‍ಡಿಪಿಐ ಹೇಳಿದೆ.

ಈ ಸಂದರ್ಭದಲ್ಲಿ ಅಬ್ದುಲ್ ಮಜೀದ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್‍ಡಿಪಿಐ, ದೇವನೂರು ಪುಟ್ಟನಂಜಯ್ಯ ಎಸ್‍ಡಿಪಿಐ ಅಭ್ಯರ್ಥಿ ಹುಣಸೂರು ವಿಧಾನಸಭಾ ಕ್ಷೇತ್ರ, ರಾಜ್ಯ ಉಪಾಧ್ಯಕ್ಷರು ಎಸ್‍ಡಿಪಿಐ ಕರ್ನಾಟಕ, ಕುಮಾರಸ್ವಾಮಿ ರಾಜ್ಯ ಕಾರ್ಯದರ್ಶಿ ಎಸ್‍ಡಿಪಿಐ ಕರ್ನಾಟಕ, ಅಬ್ರಾರ್ ಅಹಮದ್ ರಾಜ್ಯ ಸಮಿತಿ ಸದಸ್ಯರು ಎಸ್‍ಡಿಪಿಐ ಕರ್ನಾಟಕ ಉಪಸ್ಥಿತರಿದ್ದರು.

CATEGORIES
Share This

COMMENTS

Wordpress (0)
Disqus ( )
error: Content is protected !!