“ಪ್ರಕಾಶಾಭಿನಂದನೆ” ಗೆ ಪುತ್ತೂರು ನಿಂದ ಒಂದು ಸಾವಿರ ಜನ

ಪುತ್ತೂರು : (ನ.18) ಕೊಡುಗೈ ದಾನಿ ಉದ್ಯಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಜಾರ ಪ್ರಕಾಶ್ ಶೆಟ್ಟಿಯವರಿಗೆ 60 ರ ಸಂಭ್ರಮ “ಪ್ರಕಾಶಾಭಿನಂದನಾ ಕಾರ್ಯಕ್ರಮ” ಯಶಸ್ಸಿಗಾಗಿ ಪುತ್ತೂರು ಬಂಟರ ಭವನದಲ್ಲಿ ಪೂರ್ವ ಭಾವಿ ಸಭೆ ಇಂದು ಪ್ರಕಾಶಾಭಿನಂದನಾ ಕಾರ್ಯಕ್ರಮದ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

Prakashabinandane
ಪುತ್ತೂರು ನಿಂದ ಒಂದು ಸಾವಿರ ಬಂಟರು ತೆರಳುವ ಬಗ್ಗೆ ತೀರ್ಮಾನ ಮಾಡಲಾಯಿತು. ಗುರ್ಮೆ ಸುರೇಶ್ ಶೆಟ್ಟಿಯವರು ಕಾರ್ಯಕ್ರಮ ಮಾಡುವ ಉದ್ದೇಶದ ಬಗ್ಗೆ ಮಾತನಾಡಿದರು. ಪ್ರಕಾಶಾಭಿನಂದನಾ ಕಾರ್ಯಕ್ರಮದ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಡಿಯವರು ಕಾರ್ಯಕ್ರಮದ ರೂಪರೇಷದ ಬಗ್ಗೆ ವಿವರಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿ ಕಾವು ಹೇಮನಾಥ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸವಣೂರು ಸೀತಾರಾಮ ರೈ ಕಾರ್ಯಕ್ರಮದ ಜೋಡಣೆ ಬಗ್ಗೆ ಮಾತನಾಡಿದರು.

Prakashabinandane
ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ ಮನವಳಿಕೆ, ಮಲ್ಲಿಕಾ ಪ್ರಸಾದ್, ಹಿರಿಯರಾದ ಚಿಕ್ಕಪ್ಪ ನಾಯ್ಕ್ , ಬಂಟರ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣ ರೈ, ಕಾರ್ಯದರ್ಶಿ ಶಶಿಕುಮಾರ್ ರೈ ಬಾಲ್ಯೊಟ್ಟು, ಸುರೇಶ್ ಶೆಟ್ಟಿ, ಗುರು ಚರಣ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.

ವರದಿ : ರವಿಪ್ರಸಾದ್ ಶೆಟ್ಟಿ ಬನ್ನೂರು

CATEGORIES
Share This

COMMENTS

Wordpress (0)
Disqus ( )
error: Content is protected !!