ಜಿಲ್ಲಾ ಪಂಚಾಯತ್ ಸದಸ್ಯೆ ಅನಿತ ಹೇಮನಾಥ್ ಶೆಟ್ಟಿಯಿಂದ ಕುಂಟಿಕಾನ ಶಾಲೆಗೆ 1.50 ಲಕ್ಷ ರೂಪಾಯಿ ಅನುದಾನ

Advertising

ಪುತ್ತೂರು : (ನ.11) ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಕೊಳ್ತಿಗೆ ಗ್ರಾಮದ ಕುಂಟಿಕಾನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 1.50ಲಕ್ಷ ಅನುದಾನವಿರಿಸಿ ಕಾಮಗಾರಿಗೆ ಚಾಲನೆ ನೀಡಿದ ಸ್ಥಳೀಯ ಜಿಲ್ಲಾಪಂಚಾಯತ್ ಸದಸ್ಯೆ, ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾಹೇಮನಾಥ್ ಶೆಟ್ಟಿ ಯವರು ನನ್ನ ಅನುದಾನವನ್ನು ಆಧ್ಯತೆಯಮೇರೆಗೆ ನೋಡಿದ್ದೇನೆ. ಕಾಮಗಾರಿ ಒಳ್ಳೆಯ ರೀತಿಯಲ್ಲಿ (ಕ್ವಾಲಿಟಿ )ನಡೆದು ಸದುಪಯೋಗವಾಗಲಿ ಎಂದರು.

Anitha hemanth shetty
ಸ್ಥಳೀಯ ಪಂಚಾಯತಿನ ಮಾಜಿ ಅಧ್ಯಕ್ಷರಾದ ಪ್ರಮೋದ್ ಕೆ ಎಸ್ ,ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುಬ್ರಾಯ ಗೌಡ ಅಂಚಿನಡ್ಕ, ಸ್ಥಳೀಯ ಮುಖಂಡರುಗಳಾದ ಕೆ ಎಸ್ ಮುರಳೀಧರ ಗೌಡ ಕೆಮ್ಮಾರ, ಉದಯ ಭಟ್ ಮೂಲತಡ್ಕ, ಶ್ರೀಧರ ಪೂಜಾರಿ, ಅಣ್ಣು ಕಲಾಯಿ, ಕರಿಯಪ್ಪ ಪೂಜಾರಿ, ಇಸ್ಮಾಯಿಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಕ್ಷ್ಮೀಶ ಬಿ.ಎಂ ಮತ್ತು ಶಿಕ್ಷಕ-ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು .

Advertising

CATEGORIES
Share This

COMMENTS

Wordpress (0)
Disqus (0 )
error: Content is protected !!