ಸಾಮಾಜಿಕ ಸೇವೆಗೈಯ್ಯುವ ಮೂಲಕ ಈದ್ ಮಿಲಾದ್ ಆಚರಿಸಿದ ಬೀಟಿಗೆಯ ದುಲ್ಫುಖರ್ ಯುವಕರು.

Advertising

ಪುತ್ತೂರು : (ನ.10) ಈದ್ ಮಿಲಾದ್ ಹಬ್ಬದ ಪ್ರಯುಕ್ತ ದುಲ್ಫುಖರ್ ಯಂಗ್ ಮೆನ್ಸ್ ಅಸೋಸಿಯೇಶನ್ ಬೀಟಿಗೆ ಇದರ ವತಿಯಿಂದ ಸರ್ವ ಧರ್ಮದವರಿಗೂ ಸಿಹಿತಿಂಡಿಗಳನ್ನು ಹಂಚಿ, ಮಿಲಾದ್ ಜಾಥಾ ಹಾದು ಹೋದಂತಹ ಎಲ್ಲಾ ಪರಿಸರಗಳನ್ನು ಪ್ರತೀ ವರ್ಷದಂತೆ ಸಂಪೂರ್ಣ ಸ್ವಚ್ಚಗೊಳಿಸಿ, ಮುರ-ಬೀಟಿಗೆ ರಸ್ತೆಯ ಹೊಂಡಗಳಿಗೆ ಮುರದಿಂದ ಮತಾವು-ಪಲ್ಲದವರೆಗೆ ಶ್ರಮದಾನದ ಮೂಲಕ ಮಣ್ಣುಗಳನ್ನು ಹಾಕಿ,

Rehman sampya

ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾ
ಶಾಂತಿಯ ಪ್ರತೀಕ, ಲೋಕಗುರು, ಪ್ರವಾದಿ ಮುಹಮ್ಮದ್ ಮುಸ್ತಫಾ(ಸ.ಅ) ರವರ ಜನ್ಮದಿನವನ್ನು ಆಚರಿಸಲಾಯಿತು.

Rehman Samya

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದಲ್ಫುಖರ್ ಯಂಗ್ ಮೆನ್ಸ್ ಅಧ್ಯಕ್ಷರಾದ ಜಾಬೀರ್ ಬೀಟಿಗೆ, ಕಾರ್ಯದರ್ಶಿ ನೌಫಲ್ ಬೀಟಿಗೆ, ಜೊತೆ ಕಾರ್ಯದರ್ಶಿ ಬಾತೀಷ್, ಕೋಶಾಧಿಕಾರಿ ಗಫೂರ್ ಬೀಟಿಗೆ,

Rehman Samya

ಮಾಜಿ ಅಧ್ಯಕ್ಷರಾದ ಸಫ್ವಾನ್ ಬೀಟಿಗೆ, ಸಿಯಾಬ್ ಬೀಟಿಗೆ ಮತ್ತು ಸದಸ್ಯರಾದ ಆಸೀಫ್ ಬೀಟಿಗೆ, ಮಿಸ್ಬಾಹ್, ಸಾಹಿಲ್, ಯೂಸುಫ್ ಪಲ್ಲ, ಅಶ್ರಫ್ ಅಂಡೆಪುಣಿ ಮುಂತಾದವರು ಉಪಸ್ಥಿತರಿದ್ದರು.

Advertising

ವರದಿ : ರೆಹಮನ್ ಸಂಪ್ಯ

CATEGORIES
Share This

COMMENTS

Wordpress (0)
Disqus (0 )
error: Content is protected !!