ಶ್ರೀರಾಮ‌ ಶಾಲೆಯಲ್ಲಿ ರಾಜ್ಯೋತ್ಸವ ಆಚರಣೆ ವಿದ್ಯಾ ಸಮೃದ್ಧಿ ನಿಧಿ ಯೋಜನೆ ಲೋಕಾರ್ಪಣೆ.

ಪುತ್ತೂರು : (ನ.1)  ಉಪ್ಪಿನಂಗಡಿ ಇಲ್ಲಿನ  ಶ್ರೀರಾಮ ಶಾಲೆಯಲ್ಲಿ ದಿನಾಂಕ 01/11/2019 ರಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉದ್ಯಮಿ ಶ್ರೀ. ಜಯಂತ ನಡುಬೈಲು ಇವರು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ನೂತನವಾಗಿ ರೂಪುಗೊಂಡ “ಶ್ರೀರಾಮ‌ ವಿದ್ಯಾ ಸಮೃದ್ಧಿ ನಿಧಿ” ಯೋಜನೆಯನ್ನು ಉದ್ಘಾಟಿಸಿ ಶ್ರೀರಾಮ‌ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿದ್ಯಾರ್ಥಿಗಳ ವಿವಿಧ ಸಂಘಗಳು ನಡೆಸಿಕೊಟ್ಟ ವೈವಿಧ್ಯಮಯ ಚಟುವಟಿಕೆಗಳು ನಿಜಕ್ಕೂ ಅದ್ಭುತ. ಈ ಶಾಲೆಯ ಶಿಸ್ತು , ಸಂಸ್ಕಾರ ಭರಿತ ಶಿಕ್ಷಣ, ಬಡವಿದ್ಯಾರ್ಥಿಗಳಿಗಾಗಿ ನೂತನವಾಗಿ ಪ್ರಾರಂಭಗೊಂಡ ವಿದ್ಯಾ ಸಮೃದ್ಧಿ ನಿಧಿ ಯೋಜನೆಯು ಶ್ರೀರಾಮ ಶಾಲೆಯನ್ನು ಮತ್ತಷ್ಟು ಉನ್ನತಕ್ಕೇರಿಸಿದೆ ಎಂದರು.

Uppinangady

ಶ್ರೀರಾಮ ಶಾಲೆಯ ವಿದ್ಯಾರ್ಥಿಗಳ ವಿವಿಧ ಸಂಘದ ಅಧ್ಯಕ್ಷರುಗಳು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ತವಸೆಗೆ ಒಂದು ಸೇರು ಅಕ್ಕಿ ಹಾಕುವುದರ ಮೂಲಕ ನಮ್ಮ ನಾಡು ಸಮೃದ್ಧಿಯ ಸಂಕೇತ ಎಂಬುದನ್ನು ಸ್ಪಷ್ಟಪಡಿಸಿ, ಕನ್ನಡ ಉಳಿಸಿ ಬೆಳೆಸುವಲ್ಲಿ ಸದಾ ಕಾರ್ಯನಿರತರಾಗಿರುತ್ತೇವೆ ಎಂಬುದನ್ನು ಪ್ರಸ್ತುತ ಪಡಿಸಿದರು.

Uppinangady

Uppinangady

ಈ ಕಾರ್ಯಕ್ರಮದಲ್ಲಿ ಸಂಚಾಲಕರಾದ ಶ್ರೀ ಯು.ಜಿ ರಾಧ , ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕರುಣಾಕರ ಸುವರ್ಣ, ಸದಸ್ಯರಾದ ಶ್ರೀ ಸುರೇಶ್. ಜಿ, ಶ್ರೀ ಸುಧೀರ್ ಟಿ.ಎಸ್, ಶ್ರೀ ಪುರುಷೋತ್ತಮ ಮುಂಗ್ಲಿಮನೆ, ಶ್ರೀಮತಿ ಸಾಯಿರತ್ನ ಸಿ.ಎನ್, ಪೋಷಕ ಸಂಘದ ಅಧ್ಯಕ್ಷರಾದ ಶ್ರೀ ಜಯಂತ್ ಪೊರೋಳಿ ಉಪಸ್ಥಿತರಿದ್ದರು.‌

Uppinangady

ಪ್ರಾಥಮಿಕ ವಿಭಾಗದ ಮುಖ್ಯಮಾತಾಜಿ ಶ್ರೀಮತಿ ವಿಮಲ, ವಿದ್ಯಾರ್ಥಿನಿ ಕುಮಾರಿ ಅಶ್ವಿನಿ ಕಾರ್ಯಕ್ರಮ‌ ನಿರೂಪಿಸಿ, ಪ್ರೌಢ ವಿಭಾಗದ ಮುಖ್ಯ ಶ್ರೀಮಾನ್ ಶ್ರೀ. ರಘುರಾಮ ಭಟ್ ಸಿ ಇವರು ವಂದಿಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!