ಆರ್ ಎಸ್ ಎಸ್ ನಿಂದ ಟಾರ್ಗೆಟ್ ಸಿದ್ದರಾಮಯ್ಯ

ಬೆಂಗಳೂರು : (ನ.1) ಕೇಂದ್ರ & ರಾಜ್ಯ ಬಿಜೆಪಿ ಸರ್ಕಾರಕ್ಕೆ ತನ್ನ ಟೀಕಾ ಪ್ರಹಾರಗಳಿಂದ ದುಸ್ವಪ್ನವಾಗಿ ಕಾಡುತ್ತಿರುವ ಸಿದ್ದರಾಮಯ್ಯನವರನ್ನು ಸದನದಿಂದ ಹೊರಗಿಡುವ ಸಲುವಾಗಿ ಇದೀಗ ಆರ್ ಎಸ್ ಎಸ್ ನೊಳಗೆ ತಂತ್ರಗಾರಿಕೆ ಆರಂಭವಾಗಿದೆ.

Siddaramayya

ಈಗಾಗಲೇ ಬಾದಾಮಿಯಲ್ಲಿ ಚುರುಕಾಗಿ ಆರಂಭಗೊಂಡಿರುವ ಚಟುವಟಿಕೆಗಳು ಯಾವುದೇ ಕಾರಣಕ್ಕೂ ಮುಂದಿನ ಬಾರಿ ಸಿದ್ದರಾಮಯ್ಯನವರು ಗೆಲ್ಲಬಾರದು ಗೆದ್ದು ವಿಧಾನಸಭೆಯೊಳಗೆ ಪ್ರವೇಶ ಮಾಡಬಾರದು ಎಂಬ ಉದ್ದೇಶದಿಂದ ಈ ತಂತ್ರಗಾರಿಕೆಯನ್ನು ರೂಪಿಸಲಾಗುತ್ತಿದೆಯೆಂತೆ. ಇದೀಗ ವಿರೋಧ ಪಕ್ಷದ ನಾಯಕರಾಗಿ ಟಿ ವಿ ಮಾಧ್ಯಮ & ಸಾಮಾಜಿಕ ಜಾಲತಾಣದ ಮೂಲಕ ಒಂದಿಲ್ಲೊಂದು ವಿಷಯಕ್ಕೆ ಚರ್ಚೆಯಲ್ಲಿರುವ ಸಿದ್ದರಾಮಯ್ಯನವರು ಆರ್ ಎಸ್ ಎಸ್ ನ ಸಿದ್ದಾಂತಗಳನ್ನು ಬುಡಮೇಲು ಮಾಡುವಂತಹ ಮಾಹಿತಿಯನ್ನು ಬಹಿರಂಗವಾಗಿ ಹಂಚಿಕೊಳ್ಳುವ ಕಾರಣಕ್ಕೆ & ಆ ಮೂಲಕ ರಾಜಕೀಯ ಸಂಗತಿಗಳ ಮೇಲೆ ಪ್ರಭಾವ ಬೀರುತ್ತಿರುವ ಕಾರಣದಿಂದ ಅವರ ವಿರುದ್ಧ ಆಂತರಿಕ ಸಮರವನ್ನು ಸಾರಲಾಗಿದೆ.

ಕಳೆದ ಬಾರಿಯೇ ಪ್ರಯತ್ನಿಸಿದ್ದ ಆರ್ ಎಸ್ ಎಸ್ !

ಕಳೆದ ಬಾರಿಯೇ ಸಿದ್ದರಾಮಯ್ಯನವರನ್ನು ಸದನದೊಳಗೆ ಪ್ರವೇಶಿಸಂತೆ ಆರ್ ಎಸ್ ಎಸ್ ದೊಡ್ಡ ಮಟ್ಟದಲ್ಲಿ ಪ್ರಯತ್ನಿಸಿತ್ತು. ಹೀಗಾಗಿಯೇ ಮುಖ್ಯಮಂತ್ರಿಯಾಗಿದ್ದರೂ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಬಹಳಷ್ಟು ಕಷ್ಟ ಪಟ್ಟಿದ್ದರು.

Rss

ಅದರಲ್ಲೂ ಮೂಲಗಳ ಪ್ರಕಾರ ಚಾಮುಂಡೇಶ್ವರಿಯಲ್ಲಿ ಸರಿ ಸುಮಾರು 25 ಕ್ಕೂ ಹೆಚ್ಚು ಮಂದಿ ಪ್ರಭಾವೀ ನಾಯಕರು ಸಿದ್ದರಾಮಯ್ಯನವರ ಸೋಲಿಗೆ ತಮ್ಮ ತನು ಮನ & ಧನವನ್ನು ಅರ್ಪಿಸಿ ಕೆಲಸ ಮಾಡಿದ್ದರು. ಈ ಪೈಕಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರೂ ಸಹ ಈ ಒಳಸಂಚಿನಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಈಗಲೂ ಹರಿದಾಡುತ್ತಿದೆ.

ಇನ್ನು ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಅವರ ಗಣಿ ಹಣದ ಜೊತೆಗೆ ಆರ್ ಎಸ್ ಎಸ್ ನ ನಕಾರಾತ್ಮಕ ಪ್ರಚಾರವೂ ಸಹ ಸಿದ್ದರಾಮಯ್ಯನವರನ್ನು ಸೋಲುವ ಭೀತಿಗೆ ಸಿಕ್ಕಿಸಿ ಕೊನೆಗೆ ಅಲ್ಪ ಮತಗಳ ಅಂತರದಲ್ಲಿ ಜಯವನ್ನು ದಾಖಲಿಸಿದ್ದರು.

ಖರ್ಗೆ ಅವರ ವಿಷಯದಲ್ಲೂ ಇದೇ ತಂತ್ರವನ್ನು ಅನುಸರಿಸಿದ್ದ ಆರ್ ಎಸ್ ಎಸ್.

Kharge

ಇನ್ನು ಕಾಂಗ್ರೆಸ್ ನ ಪ್ರಭಾವೀ ನಾಯಕರಾದ ಶ್ರೀ.ಮಲ್ಲಿಕಾರ್ಜುನ್ ಖರ್ಗೆ ಅವರ ವಿಷಯದಲ್ಲಿಯೂ ಸಹ ಇದೇ ಮಾದರಿಯು ಕೆಲಸ ಮಾಡಿದ್ದು, ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ದಿಟ್ಟವಾಗಿ ಎದುರಿಸುತ್ತಿದ್ದ ಖರ್ಗೆಯವರನ್ನು ಸಂಸತ್ ಒಳಗೆ ಪ್ರವೇಶ ಮಾಡದಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು.

Advertising

ಸಿದ್ದರಾಮಯ್ಯನವರ ತಂತ್ರವೇನು ?

ಕೇವಲ ಹೇಳಿಕೆಗಳನ್ನು ಕೊಟ್ಟುಕೊಂಡು ತಿರುಗುತ್ತಿರುವ ಸಿದ್ದರಾಮಯ್ಯನರು ಈ ತಂತ್ರದ ಬಗ್ಗೆ ಇನ್ನೂ ಯಾವುದೇ ರೀತಿಯಲ್ಲಿ ಯೋಚನೆಯನ್ನು ಮಾಡಿದಂತೆ ಕಾಣುತ್ತಿಲ್ಲ. ಬದಲಾಗಿ ಇನ್ನೂ ಸಹ ಅವರು ಅಧಿಕಾರದ ಉಮೇದಿನಲ್ಲಿ ಇದ್ದಾರೆ. ಹೀಗಾಗಿ ಈ ಬಾರಿಯೂ ಅವರು ತಮ್ಮ ಸುತ್ತ ಮುತ್ತಲ ಬೆಳವಣಿಗೆಯ ಬಗ್ಗೆ ಎಚ್ಚೆತ್ತಕೊಳ್ಳದೇ ಇದ್ದರೆ ಈ ಬಾರಿ ಅವರು ಸಂಕಷ್ಟದ ಸಂದರ್ಭವನ್ನು ಎದುರಿಸುವ ಸಾಧ್ಯತೆಯು ದಟ್ಟವಾಗಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!