ಬಿರುವೆರ್ ಕುಡ್ಲ 34ನೇ ಸ್ಪಂದನ ಸೇವಾ ಯೋಜನೆ “ಗೋ ಪೂಜೆ “

ಮಂಗಳೂರು : (ಅ.29) ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಗೋ ಪೂಜೆಯ ಶುಭ ದಿನದಂದು ಗೋ ಮಾತೆಗೆ ಹಟ್ಟಿ ಕಟ್ಟಿಸಿ ಗೋವಿಗೆ ಆಶ್ರಯ ಒದಗಿಸಿದ ಬಿರುವೆರ್ ಕುಡ್ಲ ಬಜಪೆ ಘಟಕದ ಪೆರ್ಮುದೆ ವಲಯದ ಸದಸ್ಯರ ಕಾರ್ಯ ಶ್ಲಾಘನೀಯ.

Biruver

ಪೆರ್ಮುದೆ ನಿವಾಸಿ ನೀಲಯ್ಯ ಪೂಜಾರಿಯವರು ಕಡು ಬಡತನದಲ್ಲಿ ಒಬ್ಬರೇ ಗೋ ಸಾಕಿ ಅದರದಲ್ಲಿ ಬರುವ ಆದಾಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅವರ ಗೋ ಮಾತೆಗೆ ಮಲಗಲು ವ್ಯವಸ್ಥೆ ಇರಲಿಲ್ಲ (ಹಟ್ಟಿ ಇರಲಿಲ್ಲ) ಆ ಗೋವುಗಳು ಚಳಿ ಮಳೆಗೆ ಹೊರಗಡೆ ಮಲಗುತ್ತಿತ್ತು . ಹಟ್ಟಿ ಕಟ್ಟಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿ ಇದ್ದರು ನೀಲಯ್ಯ ಪೂಜಾರಿಯವರು.

Biruver kudla

ಇದನ್ನು ಗಮನಿಸಿದ ಬಿರುವೆರ್ ಕುಡ್ಲ ಬಜಪೆ ಘಟಕದ ಪೆರ್ಮುದೆ ವಲಯದ ಸದಸ್ಯರು ಗೋ ಮಾತೆಗೆ ಆಶ್ರಯ ಒದಗಿಸಲು ಮುಂದಾದರು. ಸ್ವತಃ ಸದಸ್ಯರೇ ಶ್ರಮದಾನ ಮಾಡಿ ಒಂದು ಸುಂದರವಾದ ಹಟ್ಟಿಯನ್ನು ನಿರ್ಮಿಸಿ ನೀಲಯ್ಯ ಪೂಜಾರಿಯವರ ಕೈಯಾರೇ ಈ ಶುಭದಿನದಂದು ಗೋವುಗಳಿಗೆ ಗೋ ಪೂಜೆ ಮಾಡಿಸಿ ಗೋವುಗಳನ್ನು ಹಟ್ಟಿ ತುಂಬಿಸಲಾಯಿತು.


ಈ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಗೌರವಾಧ್ಯಕ್ಷರು ಶ್ರೀ ಶರತ್ ಪೂಜಾರಿ ಬಜಪೆ, ಅಧ್ಯಕ್ಷರು ಪ್ರಶಾಂತ್ ಕುಮಾರ್ ಕೆಂಜಾರು-ಕಾನ, ಉಪಾಧ್ಯಕ್ಷರು ಶ್ರೀ ಚಂದ್ರಶೇಖರ್ ಅಮೀನ್, ಪ್ರಧಾನ ಕಾರ್ಯದರ್ಶಿ ಸೂರಜ್ ಪೂಜಾರಿ ಎಕ್ಕಾರು, ಪೆರ್ಮುದೆ ವಲಯದ ಸಂಚಾಲಕರು ಶ್ರೀ ಯೋಗಿಶ್ ಕೋಟ್ಯಾನ್ ಪೆರ್ಮುದೆ, ಸಹಸಂಚಾಲಕರು ಕಿರ್ತನ್ ಅಮೀನ್ ಪೆರ್ಮುದೆ, ಬಿರುವೆರ್ ಕುಡ್ಲ ಬಜಪೆ ಘಟಕದ ಪಧಾದಿಕಾರಿಗಳು ಮತ್ತು ಸದಸ್ಯರು ಹಾಗೂ ಪೆರ್ಮುದೆ ವಲಯದ ಪಧಾದಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ವರದಿ : ಶಾಶ್ವತ್ ಸಾಲ್ಯನ್

CATEGORIES
Share This

COMMENTS

Wordpress (0)
Disqus ( )
error: Content is protected !!