ಸಮಾಜಕ್ಕೆ ಮಾದರಿ ಕಾರ್ಯಕ್ರಮವಾಯಿತು ಕಡೇಶಿವಾಲಯ ದೀಪಾವಳಿ ಕ್ರೀಡೋತ್ಸವ.

ಬಂಟ್ವಾಳ : (ನ.1) ಕಡೇಶಿವಾಲಯದಲ್ಲಿ  ದೀಪಾವಳಿ ಹಬ್ಬದ ಪ್ರಯುಕ್ತ  ದಿನಾಂಕ ಅಕ್ಟೋಬರ್ 27 ರಂದು  ಕ್ರೀಡೋತ್ಸವದ ಯಶಸ್ವಿಗಾಗಿ ಬೆಳಗ್ಗೆ 8.30 ಕ್ಕೆ ಕ್ಷೇತ್ರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ಪ್ರಭು ಶ್ರೀರಾಮಚಂದ್ರನಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

Kadeshivalaya

ಅಪರಾಹ್ನ 2.30 ಕ್ಕೆ ಸರಿಯಾಗಿ ಕಡೇಶಿವಾಲಯದ ನೆಚ್ಚಿನ ಅಧ್ಯಾಪಕರಾದ ಶ್ರೀ ಭಾಸ್ಕರ್ ನಾಯ್ಕ್ ದೀಪ ಬೆಳಗಿಸಿ ಕಾರ್ತಿಕ್ ಮೇರ್ಲ ಕ್ರೀಡಾಂಗಣವನ್ನು ಉದ್ಘಾಟಿಸಿದರು.
ಮೊದಲನೆಯದಾಗಿ ಮಾಣಿ ಹಾಗೂ ಪೆರ್ನೆ ಮಂಡಲದ ತಂಡಗಳಿಗೆ ಲಗೋರಿ ಪಂದ್ಯಾಟ ನಡೆಯಿತು ನಂತರ ಬಾಲಕರ ಕಬ್ಬಡ್ಡಿ, ಬಾಲಕಿಯರ ಒಂಟಿಕಾಲಿನ ಓಟ, ಕೆರೆದಡ, ಸಂಗೀತ ಕುರ್ಚಿ, ಕುಸ್ತಿ,ತಪ್ಪಾಂಗಾಯಿ, ಪುರುಷರ ಗುಂಡೆಸೆತದ ಬಳಿಕ ತುಳಸಿಪೂಜೆ ಹಾಗೂ ಗೋಪೂಜೆ ನೆರವೇರಿತು.

Kadeshivalaya
ಸೇರಿದ ಎಲ್ಲಾ ಗಣ್ಯರು ಹಾಗೂ ಕ್ರೀಡಾಪಟುಗಳು ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಯಲ್ಲಿ ಪಾಲ್ಗೊಂಡರು.
ತದನಂತರ ವಿಶೇಷ ಕಾರ್ಯಕ್ರಮ ಭಾರತ ಮಾತಾ ಪೂಜನಾ ನಡೆಯಿತು ಹಿಂದೂ ಜಾಗರಣ ವೇದಿಕೆ ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯ, ನರಸಿಂಹ ಮಾಣಿ, ಗಣರಾಜ್ ಭಟ್ ಕೆದಿಲ, ಅರುಣ ಗಣಪತಿ ಭಟ್, ಮನೋಜ್ ಪೆರ್ನೆ, ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕ ಅಕ್ಷಯ ರಜಪೂತ್, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು ಇದರ ಅಧ್ಯಕ್ಷರಾದ ಕೆ.ಆರ್ ಶೆಟ್ಟಿ ಅಡ್ಯಾರ್ ಪದವು, ಬಿಜೆಪಿ ಮುಖಂಡ ದಿನೇಶ್ ಅಮ್ಟೂರು, ನಿವೃತ್ತ ಸೈನಿಕರಾದ ಜಗನ್ನಾಥ್ ಮಾಣಿ, ಮೋರಸ್ ಅನಂತಾಡಿ, ಅಮೃತಸಂಜೀವಿನಿ ಸೇವಾಸಂಸ್ಥೆಯ ಸದಸ್ಯರು, ಗ್ರಾಮದ ಹಲವು ಸಂಘಟನೆಗಳ ಮುಖಂಡರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

Advertising
ಸಂಜೀವಿನಿ ಸದಸ್ಯ ಅಲೋಕಿತ್ ಶೆಟ್ಟಿ ರ ಹುಟ್ಟುಹಬ್ಬದ ಪ್ರಯುಕ್ತ ಆಯ್ದ ಬಡಮಕ್ಕಳಿಗೆ ಪುಸ್ತಕ ಹಸ್ತಾಂತರಿಸಲಾಯಿತು.
ಭೋಜನ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು ಅಹರ್ಶಿನಿಯಾಗಿ ಪುರುಷರ ಕಬ್ಬಡ್ಡಿ ಹಾಗೂ ಹಗ್ಗಜಗ್ಗಾಟ ಪಂದ್ಯಾಟ ನೆರವೇರಿತು ಈ ಸಂದರ್ಭದಲ್ಲಿ ಕಬಡ್ಡಿ ತರಬೇತುದಾರ ದೀಪಕ್ ಬೋಳಂತೂರು ರವರನ್ನು ಗೌರವಿಸಿ ಸನ್ಮಾನಿಸಲಾಯಿತು ಮದಿಪುದ ಮಾಣಿಕ್ಯ ಮನ್ಮಥ ಶೆಟ್ಟಿ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.

Kadeshivalaya
ಜೊತೆಗೆ ಸೆಲ್ಫೀ ವಿಥ್ ಗುರುಸ್ವರೂಪಿ ಸ್ಪರ್ಧೆಯೂ ಕೂಡಾ ಯಶಸ್ವಿಯಾಗಿ ಮುಕ್ತಾಯದ ಹಂತವನ್ನು ತಲುಪಿತು ಸುಮಾರು 400 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದು ಉತ್ತಮ ಸಂದೇಶದ ಜೊತೆಗೆ ಎಲ್ಲರ ಪ್ರಶಂಸೆ ಗೆ ಪಾತ್ರವಾಯಿತು.

ವರದಿ : ಯೋಗೀಶ್.ಯಸ್.ಸಾಮಾನಿ
ಸಂಪಿಗೆದಡಿ-ಮಠಂತಬೆಟ್ಟು

CATEGORIES
Share This

COMMENTS

Wordpress (0)
Disqus (0 )
error: Content is protected !!