ನೆರೆ ಸಂತ್ರಸ್ಥರ ಬಗ್ಗೆ ಇಲ್ಲದ ಕಾಳಜಿ ಟಿಪ್ಪು ಸುಲ್ತಾನ್ ಬಗ್ಗೆ ಯಾಕೆ ? ಯುವ ಕಾಂಗ್ರೆಸ್ ಕಾರ್ಯದರ್ಶಿ ರಹಮನ್ ಸಂಪ್ಯ.

Advertising

ಪುತ್ತೂರು : (ಅ.30) ಕರ್ನಾಟಕದಲ್ಲಿ ಹಿಂದೆಂದೂ ಕಾಣದ ನೆರೆ ಬಂದು ಅದೆಷ್ಟೋ ಮಂದಿ ನಿರ್ಗತಿಕರಾಗಿ ಸಂಕಷ್ಟದಲ್ಲಿರುವಾಗ ಅವರ ಬದುಕಿಗೆ ಸರಕಾರ ಸ್ಪಂದಿಸುವ ಕೆಲಸ ಮಾಡುವುದು ಬಿಟ್ಟು ಟಿಪ್ಪು ಸುಲ್ತಾನ್ ಅವರ ವಿಷಯ ಪಾಠ ಪುಸ್ತಕದಿಂದ ತೆಗೆಯುವಂತಹ ನೀಚ ಕೆಲಸಕ್ಕೆ ಸರಕಾರ ಕೈ ಹಾಕಿರೋದು ನಿಜವಾಗಲೂ ವಿಷಾದನೀಯ.

Rehman samya
ಜನ ಪರವಾಗಿ ಇರಬೇಕಾದ ಸರಕಾರ ವೋಟ್ ಬ್ಯಾಂಕ್ ಗೋಸ್ಕರವೇ ಅಥವಾ ತನ್ನ ಕರ್ತವ್ಯ ಲೋಪ ಮರೆಮಾಚಲು ಇಂತಹ ವಿಷಯಗಳನ್ನು ಚರ್ಚೆಗೆ ತಂದು ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಸರಕಾರ ಮಾಡುತ್ತಿದೆ.

ಸರಕಾರ ಎಂಬುದು ರಾಜ್ಯದ ಅಭಿವೃದ್ಧಿ ಮತ್ತು ಜನರ ರಕ್ಷಣೆಗೆ ಎಂಬುದನ್ನು ತಿಳಿಯಬೇಕಿದೆ. ಇಂತಹ ಅನಗತ್ಯ ವಿಷಯಗಳನ್ನು ಕೈ ಬಿಟ್ಟು ಅಭಿವೃದ್ಧಿಯ ಕಡೆ ಗಮನ ಕೊಡಿ ಎಂದು ಪುತ್ತೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ರಹೆಮಾನ್ ಸಂಪ್ಯ ಹೇಳಿದ್ದಾರೆ.

CATEGORIES
Share This

COMMENTS

Wordpress (0)
Disqus (0 )
error: Content is protected !!