ತೋಟಗಾರಿಕೆ ಬೆಳೆಗಳಲ್ಲಿ ಪೋಷಕಾಂಶ, ನೀರಿನ ನಿರ್ವಹಣೆ ಕುರಿತ ಕಾರ್ಯಗಾರ

ಬಂಟ್ವಾಳ : (ಅ.29) ತೋಟಗಾರಿಕೆ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಲಯನ್ಸ್ ಕ್ಲಬ್ ಮಾಣಿ ಮತ್ತು ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಸಂಘ ಇವುಗಳ ಜಂಟಿ ಆಶ್ರಯದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಪೋಷಕಾಂಶ ಹಾಗೂ ನೀರಿನ ನಿರ್ವಹಣೆ ಕುರಿತು ಮಾಹಿತಿ ಕಾರ್ಯಕ್ರಮ ಮಂಗಳವಾರ ಅಕ್ಟೋಬರ್ 29 ರಂದು ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಸಂಘದ ವಠಾರದಲ್ಲಿ ನಡೆಯಿತು.

Mani
ಕಾರ್ಯಕ್ರಮ ದ ಉದ್ಘಾಟನೆಯನ್ನು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಕರ್ಕೇರ ನೆರವೇರಿಸಿದರು, ಸಮಾರಂಭದ ಅಧ್ಯಕ್ಷತೆಯನ್ನು ಕಡೇಶ್ವಾಲ್ಯ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ಎಸ್ ಶೆಟ್ಟಿ ವಹಿಸಿದರು,

Mani
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬಂಟ್ವಾಳ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ಶ್ರಿ .ಜೋ.ಪ್ರದೀಪ್ ಡಿ’ಸೋಜ ಕೃಷಿಯಲ್ಲಿ ಅಧುನಿಕ ಉಪಕರಣಗಳ ಬಳಕೆ ಬಗ್ಗೆ ಸುಮಾರು 100 ಕ್ಕೂ ಅಧಿಕ ಮಂದಿ ಕೃಷಿಕರಿಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ನೀಡಿದರು. ಲಯನ್ಸ್ ಕ್ಲಬ್ ಮಾಣಿ ಇದರ ಅಧ್ಯಕ್ಷರಾದ ಲಯನ್ ಜಿ. ಗಂಗಾಧರ ರೈ  ಅತಿಥಿಗಳಿಗೆ ಮತ್ತು ಕೃಷಿಕ ಬಂಧುಗಳಿಗೆ ಸ್ವಾಗತ ಕೋರಿದರು.

Mani
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ. ಕಮಲಾಕ್ಷಿ ಕೆ ಪೂಜಾರಿ, ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹನಧಿಕಾರಿ ಶ್ರೀ ರಮೇಶ್, ಕಡೇಶ್ವಾಲ್ಯ ವ್ಯವಸಾಯ ಸೇವಾ ಸಹಕಾರಿ ಸಂಘ ದ ಅಧ್ಯಕ್ಷ ಲ. ವಿದ್ಯಾಧರ ರೈ, ಉಪಾಧ್ಯಕ್ಷರಾದ ಶ್ರೀ ಆನಂದ ಬರಿಮಾರ್, ಲ. ಗಣೇಶ್ ಶೆಟ್ಟಿ, ಲ. ಮೋಹನ್ ದಾಸ್ ಶೆಟ್ಟಿ, ಮಾಣಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲ. ಉಮೇಶ್ ಪಿ ಉಪಸ್ಥಿತರಿದ್ದರು.
ಶ್ರೀ. ಗಿರಿಯಪ್ಪ ಗೌಡ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ಪ್ರಥಮ್ ರೈ

CATEGORIES
Share This

COMMENTS

Wordpress (0)
Disqus (0 )
error: Content is protected !!