ವಿಶ್ವ ಶಾಂತಿಗಾಗಿ ಚಿತ್ರ ಬಿಡುಗಡೆ

ಪುತ್ತೂರು : (ಅ.29) ಕಾವು ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಶಾಲೆಯಲ್ಲಿ ವಿಶ್ವ ಶಾಂತಿಗಾಗಿ ಚಿತ್ರಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಅತ್ಯುತ್ತಮ ಚಿತ್ರವನ್ನು ಲಯನ್ಸ್ 317D ಉಪ ಗವರ್ನರ್ ಡಾ. ಗೀತ್ ಪ್ರಕಾಶ್ ಬಿಡುಗಡೆಗೊಳಿಸಿದರು. ಲ. ಕಾವು ಹೇಮನಾಥ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು.

Lions club
ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಲ.ಗೋವರ್ಧನ್ ಶೆಟ್ಟಿ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ.ಕೃಷ್ಣ ಪ್ರಶಾಂತ್, ವಲಯ ಅಧ್ಯಕ್ಷ ಲ.ಆನಂದ ರೈ, ತಾ.ಪಂ ಸದಸ್ಯ ರಾಮಾ ಪಾಂಬಾರು, ಕಾರ್ಯದರ್ಶಿ ಲ. ರಮೇಶ್ ರೈ ಸಾಂತ್ಯ , ಖಜಾಂಜಿ ಲ.ಕೃಷ್ಣಪ್ಪ ಗೌಡ, ಲ.ಪಾವನ ರಾಮ ಉಪಸ್ಥಿತರಿದ್ದರು.
ಮುಖ್ಯ ಗುರುಗಳು ಉಕ್ರಪ್ಪ ನಾಯ್ಕ ಸ್ವಾಗತಿಸಿ ಶಿಕ್ಷಕ ಭಾಸ್ಕರ್ ವಂದಿಸಿದರು. ಶಿಕ್ಷಕಿ ಪ್ರತಿಮ ಕಾರ್ಯಕ್ರಮ ನಿರ್ವಹಿಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!