
ದೀಪಾವಳಿ ದೀಪಾಲಂಕರದಲ್ಲಿ ಬೆಳಗಿದ ದೇವಿ ಶ್ರೀ ಮಹಿಷಮರ್ದಿನಿ
ಪುತ್ತೂರು : (ಅ.28) ಮಠಂತಬೆಟ್ಟು ಶ್ರೀ ಮಹೀಷಮರ್ದೀನಿ ದೇವಿಯ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕ ಶ್ರೀ ರಾಮಕೃಷ್ಣ ಭಟ್ ನೇತೃತ್ವದಲ್ಲಿ ದೀಪಾವಳಿ ಯ ವಿಶೇಷ ದಿನದಂದು ಶ್ರೀ ದೇವಿಗೆ ಸಹಸ್ರ ದೀಪಾಲಂಕರ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ, ಕಾರ್ಯಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು
ಮತ್ತು ಸಮಿತಿಯ ವಿವಿಧ ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು ,
ಸಮಿತಿ ಸದಸ್ಯರುಗಳು, ಹಾಗೂ ದೇವಿಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು, ಜೊತೆಗೆ ಭಕ್ತಾದಿಗಳಿಗೆ ಶ್ರೀ ದೇವರ ಅನ್ನಪ್ರಸಾದ ವಿತರಿಸಲಾಯಿತು.
ವರದಿ : ಯೋಗಿಶ್ ಸಾಮಾನಿ ಮಠಂತಬೆಟ್ಟು