ಹಸಿರು ದೀಪಾವಳಿ ಆಚರಿಸಲು ಸುನೀಲ್ ಗೌಡ ಪಾಟೀಲ್ ಕರೆ

ವಿಜಯಪುರ (ಅ.26). ಅವಳಿ ಜಿಲ್ಲೆಯಲ್ಲಿ ಬರ ಹಾಗೂ ನೆರೆಯಿಂದ ಸಾಕಷ್ಟು ಜನರು ಹಾನಿ ಅನುಭವಿಸಿದ್ದು, ಅವರಲ್ಲಿ ದೀಪಾವಳಿ ಹೊಸ ಚೈತನ್ಯ ಮೂಡಿಸಿ, ಬೆಳಕಿನ ಹಣತೆ ಹಚ್ಚಲಿ ಎಂದು ಅವಳಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ತಿಳಿಸಿದ್ದಾರೆ.

Sunil gowda patil
ನಾನು ಪ್ರತಿನಿಧಿಸುವ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳು ಈ ಬಾರಿ ಅತೀವೃಷ್ಟಿ, ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ನೆರವಾಗಲು ನಾವೆಲ್ಲ ಹಸಿರು ದೀಪಾವಳಿ ಆಚರಿಸುವ ಮೂಲಕ ಸಂಕಷ್ಟದಲ್ಲಿರುವ ಸಂತ್ರಸ್ತರೊಂದಿಗೆ ನಾವಿದ್ದೇವೆ ಎಂಬ ಸಂದೇಶ ನಿಡೋಣ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಶಬ್ದ, ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿ, ಮದ್ದುಗಳನ್ನು ಕಡಿಮೆ ಮಾಡುವುದರ ಮೂಲಕ ಪರಿಸರ ರಕ್ಷಣೆಗೆ ಪಣ ತೊಡುವ ಅಗತ್ಯ ಇದೆ ಎಂದರು.

Advertising
ಈ ಬಾರಿ ನನ್ನ ಜನ್ಮದಿನದಂದು ಸಂತ್ರಸ್ತರೊಂದಿಗೆ ಕಳೆಯುವ ಮೂಲಕ ಯಾವುದೇ ಆಚರಣೆಗಳನ್ನು ಮಾಡುವುದಿಲ್ಲ ಎಂದು ಸುನೀಲಗೌಡ ಪಾಟೀಲ್ ಹೇಳಿದ್ದಾರೆ.

CATEGORIES
Share This

COMMENTS

Wordpress (0)
Disqus (0 )
error: Content is protected !!