ಡಿಸಿಎಂ ಆಗಮನ‌ ಹಿನ್ನೆಲೆ ಗರ್ಭಿಣಿ ಪೋಲಿಸರ ಗಸ್ತು ನಿಯೋಜನೆ ವ್ಯಾಪಕ‌ ಆಕ್ರೋಶ

 

Advertising
ಮಂಗಳೂರು : (ಅ.26) ದಕ್ಷಿಣ ಕನ್ನಡ ಜಿಲ್ಲೆಗೆ ಡಿಸಿಎಂ ಅಶ್ವತ್ಥ ನಾರಾಯಣ ಆಗಮನ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೋಲೀಸರನ್ನು ಗಸ್ತು ನಿಯೋಜಿಸಲಾಗಿತ್ತು. ಒಂದು ತುಂಬು ಗರ್ಭಿಣಿ ಮಹಿಳಾ ಪೋಲೀಸ್ ಪೇದೆಯನ್ನು ಕೂಡಾ ನಿಯೋಜಿಸಲಾಗಿತ್ತು.

Karkala

ಈ ಮಹಿಳಾ ಪೋಲೀಸ್ ಬರೊಬ್ಬರಿ 3 ಗಂಟೆಗಳ ಕಾಲ ಲಾಠಿ ಹಿಡಿದು ಬಿಸಿಲಿಗೆ ನಿಂತು ಬಸವಳಿದಿರುವುದನ್ನು ಕಂಡ ಯಾರೋ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಇದು ಟ್ರೋಲ್ ಆಗಿದೆ. ಮಹಿಳೆಯೊಬ್ಬರಿಗೆ ಈ ರೀತಿ ಕಷ್ಟಕೊಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಗಂಭೀರತೆ ಅರಿತ ಕೂಡಲೇ ಕಮೀಷನರ್  ಕ್ಷಮೆ ಯಾಚಿಸಿದ್ದಾರೆ.
ಈ ಬೇಜವಾಬ್ದಾರಿ ಘಟನೆಗೆ ಕಾರಣರಾದ ಅಧಿಕಾರಿಯ ವಿರುದ್ದ ಏನು‌ ಕ್ರಮ ಕೈಗೊಳ್ಳುತ್ತಾರೆಂದು ಕಾದು ನೋಡಬೇಕಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!