ಕಾವು ಶಾಲೆ ಬಡವರನ್ನೂ ಸಮಾನವಾಗಿ ಬೆಳೆಸುವ ಕೆಲಸ ಮಾಡುತ್ತಿದೆ ಲ.ಡಾ.ಗೀತ್ ಪ್ರಕಾಶ್

ಪುತ್ತೂರು : (ಅ.26)ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕಾವು ಸರಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಲಯನ್ಸ್ 317D ಉಪ ಗವರ್ನರ್ ಡಾ. ಗೀತ್ ಪ್ರಕಾಶ್ ಮಾತನಾಡಿ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಇಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭ ಮಾಡುವುದರೊಂದಿಗೆ ಖಾಸಗೀ ಶಾಲೆಯೊಂದಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಸರಕಾರಿ ಶಾಲೆಯನ್ನು ಬೆಳೆಸಿದ ಕೀರ್ತಿ ಅದು ಕಾವು ಹೇಮನಾಥ್ ಶೆಟ್ಟಿಯವರಿಗೆ ಸಲ್ಲಬೇಕು.

Hemanath shetty

ಜಿಲ್ಲೆಯಲ್ಲಿಯೇ ಪ್ರಥಮಬಾರಿಗೆ ಇಲ್ಲಿ ಇಂತಹ ಕ್ಲಾಸ್ ಪ್ರಾರಂಭವಾಗಿದೆ ಎಂಬುದು ನಮಗೆ ಹೆಮ್ಮೆ ತಂದಿದೆ. ಈ ಶಾಲೆಯನ್ನು ದತ್ತು ಸ್ವೀಕರಿಸಿ ಎಲ್.ಕೆ.ಜಿ, ಯು.ಕೆ.ಜಿ ಕ್ಲಾಸ್ ಪ್ರಾರಂಭಿಸಿ ಬಡ ಮಕ್ಕಳಿಗೂ ಯಾವುದರಲ್ಲಿಯೂ ಕಡಿಮೆಯಿಲ್ಲ. ಎಲ್ಲರೂ ಸಮಾನರು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಇದೀಗ ಕಾವು ಎಂದು ಹೇಳಿದ ತಕ್ಷಣ ಹೇಮನಾಥ್ ಶೆಟ್ಟಿ ಎಂದು ಹೇಳುವಂತಾಗಿದೆ. ಎಂದು ಹೇಳಿ ಶುಭಹಾರೈಸಿದರು.

Hemanath shetty

Hemanath shetty
ಸ್ಮಾರ್ಟ್ ಕ್ಲಾಸ್ ಮತ್ತು ವಿಶ್ವ ಶಾಂತಿಗಾಗಿ ಚಿತ್ರವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀ ಮತಿ ಅನಿತಾ ಹೇಮನಾಥ್ ಶೆಟ್ಟಿ ಉದ್ಘಾಟಿಸಿದರು. ಮತ್ತೆ ಮಾತನಾಡಿದ ಅವರು ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಂಸ್ಕಾರವಂತರಾಗಿ ಬೆಳೆದರೆ ದೇಶಕ್ಕೆ ದೊಡ್ಡ ಆಸ್ತಿ. ಬಡವರ ಮಕ್ಕಳೂ ಕೂಡ ಸಮಾನರಾಗಿ ಬೆಳೆಯಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.

Hemanath shetty
ಸ್ಮಾರ್ಟ್ ಕ್ಲಾಸ್ ಕಟ್ಟಡ ಉದ್ಘಾಟಿಸಿದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ ಸರಕಾರದ ಯೋಜನೆಯೊಂದಿಗೆ ಅಂತರ್ರಾಷ್ಟ್ರೀಯ ಸಂಸ್ಥೆ ಲಯನ್ಸ್ ಕೈ ಜೋಡಿಸಿ ಶಾಲೆಯ ಅಭಿವೃದ್ಧಿ ನಡೆಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು.

Hemanath shetty
ಪುತ್ತೂರು ನಲ್ಲಿ ಮುಂದಿನ‌ ತಿಂಗಳು ಪುತ್ತೂರು ಕಾವು ಮತ್ತು ಪುತ್ತೂರು ಲಯನ್ಸ್ ಆಶ್ರಯದಲ್ಲಿ ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆಯಲ್ಲಿ ಮೆಘಾ ಮೆಡಿಕಲ್ ಕ್ಯಾಂಪ್ ನಡೆಯಲಿದೆ ಅದರ ಮಾಹಿತಿಯನ್ನು ಲ.ಗೋವರ್ಧನ್ ಶೆಟ್ಟಿಯವರು ನೀಡಿದರು.
ಅಧ್ಯಕ್ಷತೆ ವಹಿಸಿದ ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಲ.ಹೇಮನಾಥ್ ಶೆಟ್ಟಿ ಕಾವು ಮಾತನಾಡಿ ನಮ್ಮೂರಿನ ಶಾಲೆ ಅಭಿವೃದ್ಧಿ ಯಾದರೆ ನಮ್ಮ ಮಕ್ಕಳು ವಿದ್ಯಾವಂತರಾದರೆ ಅದುವೇ ನಮ್ಮ ಊರಿನ ರಾಜ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂಬ ಕಲ್ಪನೆ ನಮ್ಮದು. ಅದರಿಂದಾಗಿ ಶಾಲೆಯ ಅಭಿವೃದ್ಧಿ ಯಲ್ಲಿ ನಾವೆಲ್ಲ ಕೈ ಜೋಡಿಸಿದ್ದೇವೆ. ಇನ್ನು ಮುಂದೆಯೂ ಶಾಲೆಯ ಅಭಿವೃದ್ಧಿ ಕಾರ್ಯಗಳು ನಡೆಯಲಿಕ್ಕಿದೆ.  ಮಾಡ್ನೂರು ಗ್ರಾಮವನ್ನು ದತ್ತು ತೆಗೆದುಕೊಂಡು ಸಮಾಜ ಸೇವೆ ಮಾಡುವುದು ನಮ್ಮ ಮುಂದಿನ ನಮ್ಮ ಕಾರ್ಯಕ್ರಮ ಇದಕ್ಕೂ ಎಲ್ಲರ ಸಹಕಾರ ಅತೀ ಅಗತ್ಯವಾಗಿದೆ ಎಂದರು.

Hemanath
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ.ಕೃಷ್ಣ ಪ್ರಶಾಂತ್ ಶುಭಹಾರೈಸಿದರು, ವಲಯ ಅಧ್ಯಕ್ಷ ಲ.ಆನಂದ ರೈ, ತಾ.ಪಂ ಸದಸ್ಯ ರಾಮಾ ಪಾಂಬಾರು, ಕಾರ್ಯದರ್ಶಿ ಲ. ರಮೇಶ್ ರೈ ಸಾಂತ್ಯ , ಖಜಾಂಜಿ ಲ.ಕೃಷ್ಣಪ್ಪ ಗೌಡ, ಲ.ಪಾವನ ರಾಮ ಉಪಸ್ಥಿತರಿದ್ದರು.
ಮುಖ್ಯ ಗುರುಗಳು ಉಕ್ರಪ್ಪ ನಾಯ್ಕ ಸ್ವಾಗತಿಸಿ ಶಿಕ್ಷಕ ಭಾಸ್ಕರ್ ವಂದಿಸಿದರು. ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.

Advertising

CATEGORIES
Share This

COMMENTS

Wordpress (0)
Disqus (0 )
error: Content is protected !!