“ರಾಜಭವನ ಚಲೋ” ಯಶಸ್ವಿಗೊಳಿಸಲು ಕೆಂಪರಾಜ್ ಗೌಡ ಮನವಿ.

ಬೆಂಗಳೂರು :(ಅ.21) ರಾಜ್ಯದ ನೆರೆ ಸಂತ್ರಸ್ತರ ನೆರವಿಗೆ ಧಾವಿಸದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಧೋರಣೆಯನ್ನು ಖಂಡಿಸಿ, ಈ ಕೂಡಲೇ ನೆರೆ ಸಂತ್ರಸ್ತರಿಗೆ ಪುನರ್ವಸತಿ ಆರ್ಥಿಕ ನೆರವು ನೀಡಿ, ನಾಶವಾದ ರೈತರ ಬೆಳೆಗಳಿಗೆ ಪರಿಹಾರವನ್ನು ಘೋಷಿಸುವಂತೆ ಆಗ್ರಹಿಸಿ, ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ” ಡಿ.ಕೆ. ಶಿವಕುಮಾರ್” ಹಾಗೂ “ಡಾ| ಜಿ . ಪರಮೇಶ್ವರ್” ಸೇರಿದಂತೆ ಅನೇಕ ನಾಯಕರ ಮೇಲೆ ED, IT, CBI, ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ರಾಜಕೀಯವಾಗಿ ಕುತಂತ್ರ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ,

Kemparaj gowda

ಕರ್ನಾಟಕ ಯುವ ಕಾಂಗ್ರೆಸ್ ವತಿಯಿಂದ ದಿನಾಂಕ : 23/10/2019ರ ಬೆಳಗ್ಗೆ 10:00 ಗಂಟೆಗೆ “ರಾಜಭವನ ಚಲೋ” ಪ್ರತಿಭಟನಾ ಮೆರವಣಿಗೆಯನ್ನು ಮೌರ್ಯ ವೃತ್ತದಿಂದ          (ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಮೆ) ಚಾಲುಕ್ಯ ವೃತ್ತದ ಮಾರ್ಗವಾಗಿ ರಾಜಭವನಕ್ಕೆ ತೆರಳಿ ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಪತ್ರವನ್ನು ನೀಡಲಾಗುವುದು, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಬಿ.ವಿ. ಶ್ರೀನಿವಾಸ್ ರವರು, ಶಾಸಕರುಗಳು, ಹಿರಿಯ ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಲಿದ್ದು, ಎಲ್ಲಾ ಕೆ.ಪಿ.ವೈ.ಸಿ.ಸಿ ಪದಾಧಿಕಾರಿಗಳು ಮತ್ತು ಜಿಲ್ಲಾ ಅಧ್ಯಕ್ಷರುಗಳು ತಮ್ಮ ಸಮಿತಿ ಸದಸ್ಯರು‌, ಯುವ ಕಾಂಗ್ರೆಸ್ ಸದಸ್ಯರುಗಳೊಂದಿಗೆ ಪ್ರತಿಭಟನೆ ಮೆರವಣಿಗೆಯಲ್ಲಿ ಭಾಗವಹಿಸುವಂತೆ ರಾಜ್ಯ ಯುವ ಕಾಂಗ್ರೆಸ್ ನ ಉಪಾಧ್ಯಕ್ಷರಾದ ಶ್ರೀ. ಕೆಂಪರಾಜ್ ಗೌಡ ಮನವಿ ಮಾಡಿದ್ದಾರೆ.

CATEGORIES
Share This

COMMENTS

Wordpress (0)
Disqus (0 )
error: Content is protected !!