ಕಾಂಗ್ರೆಸ್ ಶಾಸಕ ನ ಹತ್ಯೆಗೆ ಯತ್ನ.

ಬೆಂಗಳೂರು: (ಅ.18)  ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್  ಶಾಸಕ ಬೈರತಿ ಎಸ್. ಸುರೇಶ್ ಮೇಲೆ ಹಲ್ಲೆಗೆ ಯತ್ನಿಸಿದ ವ್ಯಕ್ತಿಯನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

Byrathi a suresh
ಕೆ.ಆರ್ ಪುರಂ ನ ಬೈರತಿಯಲ್ಲಿರುವ ತನ್ನ ನಿವಾಸದ ಮುಂದೆ ಸುರೇಶ್ ರವರ ಕಾರಿಗೆ ಆರೋಪಿ ತನ್ನ ಬೈಕ್ ನಿಂದ ಗುದ್ದಿದ್ದಾನೆ, ನಂತರ ಶಾಸಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಇದೇ ಸಮಯಕ್ಕೆ ಸರಿಯಾಗಿ ಬೈರತಿ ಎಸ್. ಸುರೇಶ್ ರವರ ಗನ್ ಮ್ಯಾನ್ ಗಳು ಬಂದು ಆರೋಪಿಯನ್ನು  ಹಿಡಿದಿದ್ದಾರೆ, ಕೊತ್ತನೂರು ದಿಣ್ಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆಗೆ ಯತ್ನಿಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Byrathi s suresh
ಈ ಬಗ್ಗೆ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿರುವ ಬೈರತಿ ಸುರೇಶ್ ಹಲ್ಲೆ ಮಾಡಿದ ವ್ಯಕ್ತಿ ನನ್ನ ಮೇಲೆ ಏಕೆ ಹಲ್ಲೆ ಮಾಡಿದರು ಎಂದು ನನಗೆ ಗೊತ್ತಿಲ್ಲ, ನಾನು ಯಾರೋಂದಿಗೂ ವಯಕ್ತಿಕ ದ್ವೇಷ ಇಟ್ಟುಕೊಂಡಿಲ್ಲ  ಪೊಲೀಸರು ಈ ಸಂಬಂಧ ಸೂಕ್ತ ತನಿಖೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

CATEGORIES
Share This

COMMENTS

Wordpress (0)
Disqus (0 )