ಮತ್ತೆ ಅದ್ಧೂರಿಯಾಗಿ ನಡೆಯಲಿದೆ ಪುತ್ತೂರು ಕಂಬಳ

ಪುತ್ತೂರು:(ಅ.17) ಉದ್ಯಮಿ ಹಾಗೂ ಕೊಡುಗೈ ದಾನಿ, ಜಯಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶ್ರೀ .ಎನ್. ಮುತ್ತಪ್ಪ ರೈ ನೇತೃತ್ವ ಮತ್ತು ಮಾಜಿ ಸಚಿವ ಶ್ರೀ ವಿನಯ ಕುಮಾರ್ ಸೊರಕೆ ಗೌರವಧ್ಯಕ್ಷತೆಯಲ್ಲಿ ನಡೆಯುವ ಪ್ರತಿಷ್ಠಿತ ಪುತ್ತೂರು “ಕೋಟಿ – ಚೆನ್ನಯ್ಯ” ಜೋಡು ಕರೆ ಕಂಬಳವು 2020 ರ ಜನವರಿ 18 , 19 ರಂದು ನಡೆಯಲಿದ್ದು ಇದರ ಯಶಸ್ಸಿಗಾಗಿ

Kambala

ಅಕ್ಟೋಬರ್ 17 ರಂದು ಕಂಬಳ ಸಮಿತಿ ಅಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ಸಮ್ಮುಖದಲ್ಲಿ ಪದಾಧಿಕಾರಿಗಳ ಸಭೆಯು ಪುತ್ತೂರಿನ ಆಫೀಸರ್ಸ್ ಕ್ಲಬ್ ನಲ್ಲಿ ನಡೆಯಿತು.

Kambala
ಸಭೆಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ, ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ, ಶಿವರಾಮ್ ಆಳ್ವ ಕುರಿಯ, ನಿರಂಜನ್ ರೈ ಮಠಂತಬೆಟ್ಟು, ಲೂಯಿಸ್ ಡಯಾಸ್, ಕುಂಬ್ರ ದುರ್ಗಾಪ್ರಸಾದ್ ರೈ, ರೋಶನ್ ರೈ ಬನ್ನೂರು, ನವೀನ್ ಚಂದ್ರ ನಾಯ್ಕ್, ರೋಶನ್ ರೆಬೆಲ್ಲೊ, ಸುದೇಶ್ ಚಿಕ್ಕಪುತ್ತೂರು, ಜಿನ್ನಪ್ಪ ನಾಯ್ಕ್ ಮುರ, ಶ್ರೀರಾಂ ಪಕಳ, ವಿಕ್ರಮ್ ರೈ ಸಾಂತ್ಯ, ಮಾಣಿಕ್ಯರಾಜ್ ಪಡಿವಾಳ್, ನೇಮಾಕ್ಷ ಸುವರ್ಣ, ಸುದೀರ್ ಶೆಟ್ಟಿ, ದಾವೂದ್ ಬನ್ನೂರು, ಜೋಕಿಂ ಡಿ’ಸೋಜಾ, ಕಿಶೋರ್ ಪೂಜಾರಿ, ರವೀಶ್ ಕಾಡುಮನೆ, ಸುನೈದ್, ಎಂ ಬಿ ಇಬ್ರಾಹಿಂ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವರದಿ: ಆದರ್ಶ ಶೆಟ್ಟಿ ಉಪ್ಪಿನಂಗಡಿ

CATEGORIES
Share This

COMMENTS

Wordpress (0)
Disqus (0 )
error: Content is protected !!