ಮಾನವೀಯತೆ ಮೆರೆದ “ಎ.ಆರ್ ವಾರಿಯರ್ಸ್‌”

ಪುತ್ತೂರು : ಹತ್ತು ಹಲವಾರು ಸಾಮಾಜಿಕ, ಧಾರ್ಮಿಕ,ದಾನ, ಧರ್ಮದ ಕಾರ್ಯದ ಮೂಲಕ ಮನೆ ಮಾತಾಗಿರುವ ಉದ್ಯಮಿ, ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ಮುಖ್ಯಸ್ಥರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಂದ ಪ್ರೇರಣೆಗೊಂಡು ಒಂದಷ್ಟು ಯುವಕರು ಸೇರಿ ಕಟ್ಟಿದ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ “ಎ.ಆರ್ ವಾರಿಯರ್ಸ್‌” ಮೂಲಕ ಇತ್ತೀಚೆಗೆ ಮೃತಪಟ್ಟ ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲರ ಸವಿನೆನಪುಗಳ ಜೊತೆಗೆ ಪ್ರತಿ ತಿಂಗಳು ಒಂದು ಆಸಕ್ತ ಕುಟುಂಬಕ್ಕೆ ಆಹಾರ ಧಾನ್ಯ ನೀಡುವ ಯೋಜನೆಯ ಪ್ರಥಮ ಹಂತವಾಗಿ ಕಳೆದ ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ಪುತ್ತೂರು ತಾಲೂಕಿನ ಬೀರಾವು ನಿವಾಸಿ ಹರೀಶ್ ಅವರ ಮನೆಗೆ ಆಹಾರ ಧಾನ್ಯಗಳನ್ನು ಎ.ಆರ್ ವಾರಿಯರ್ಸ್‌ ನ ಸದಸ್ಯರು ಒದಗಿಸಿದರು.

Ashok rai

ಈ ಸಂದರ್ಭದಲ್ಲಿ ಪ್ರಜ್ವಲ್ ರೈ ಸವಣೂರು, ಧನು ಪಟ್ಲ ಕಲ್ಲೇಗ, ಕಮಲ್ ಕುಲಾಲ್, ಸುಜಿತ್ ಬಂಗೇರ ಸಂಟ್ಯಾರ್, ಪ್ರಜನ್ ರೈ ತೊಟ್ಲ, ಭರತ್ ಶೆಟ್ಟಿ, ರಾಕೇಶ್ ಈಶ್ವರಮಂಗಲ, ಮನೋಜ್ ಸಂಟ್ಯಾರ್ ಉಪಸ್ಥಿತರಿದ್ದರು.ಎ ಆರ್ ವಾರಿಯರ್ಸ್‌ ಬಳಗದ ಮೂಲಕ ಇತ್ತೀಚೆಗೆ ನೂರಾರು ಯುವಕರು ಸೇರಿ ನೆರೆ ಪೀಡಿತ ಪ್ರದೇಶವಾದ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ಶ್ರಮದಾನ ಕಾರ್ಯ ಮಾಡಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

 

CATEGORIES
Share This

COMMENTS

Wordpress (0)
Disqus (0 )
error: Content is protected !!