“ಉದ್ಯಾವರ ಫ್ರೆಂಡ್ಸ್ ಸರ್ಕಲ್” ಗೌರವಾಧ್ಯಕ್ಷರಾಗಿ ಶ್ರೀ ಅಸ್ಕರ್ ಫೆರ್ನಾಂಡಿಸ್.

 

ಉಡುಪಿ: ಉದ್ಯಾವರ ಫ್ರೆಂಡ್ಸ್ ಸರ್ಕಲ್  ಸಂಸ್ಥೆಯ 2019- 29 ರ ಸಾಲಿನ (46ನೇ ವರ್ಷ) ಅಧ್ಯಕ್ಷರಾಗಿ ಶ್ರೀ ತಿಲಕ್‍ರಾಜ್ ಸಾಲ್ಯಾನ್ ಇವರು ಪುನರಾಯ್ಕೆಯಾದರು.

Udyavara friends

 

ಗೌರವ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವರು, ರಾಜ್ಯಸಭಾ ಸದಸ್ಯರೂ ಆದ ಶ್ರೀ ಅಸ್ಕರ್ ಫೆರ್ನಾಂಡಿಸ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್ ಗುಡ್ಡೆಯಂಗಡಿ ಮರು ಆಯ್ಕೆಗೊಂಡರು.

Udyavara

 

ಇನ್ನಿತರ ಪದಾಧಿಕಾರಿಗಳಾಗಿ
ಶ್ರೀಮತಿ ಸುಗಂಧಿ ಶೇಖರ್ ಮತ್ತು ಶ್ರೀ ಲೋಕನಾಥ ಬೊಳ್ಜೆ ಉಪಾಧ್ಯಕ್ಷರು , ಕಾರ್ಯದರ್ಶಿಗಳು ಶ್ರೀ ಯು.ಆರ್. ಚಂದ್ರಶೇಖರ್, ಶ್ರೀ ರಮೇಶ್‍ಕುಮಾರ್ ಉದ್ಯಾವರ, ಕೋಶಾಧಿಕಾರಿಗಳಾಗಿ ಸೋಮಶೇಖರ್ ಸುರತ್ಕಲ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಧರ ಗಣೇಶ್ ನಗರ, ಸಂಘಟನಾ ಕಾರ್ಯದರ್ಶಿಗಳು ಸತೀಶ್ ಡಿ. ಸಾಲ್ಯಾನ್ ಮತ್ತು ಅಬ್ದುಲ್ ಹಮೀದ್ ಸಾಬ್ಜಾನ್, ಆಂತರಿಕ ಲೆಕ್ಕಪರಿಶೋಧಕರು, ಹಬೀಬ್ ಪಳ್ಳಿ, ನಿರ್ದೇಶಕರಾಗಿ ಶ್ರೀ ಅಬ್ಬುಲ್ ಜಲೀಲ್ ಸಾಹೇಬ್, ಮಹಮ್ಮದ್ ನಯಾಜ್, ಜಾರ್ಜ್ ಮಿನೇಜಸ್, ಯು. ಪಧ್ಮನಾಭ ಕಾಮತ್, ಶ್ರೀಮತಿ ಚಂದ್ರಾವತಿ ಎಸ್. ಭಂಡಾರಿ, ಶರತ್ ಕುಮಾರ್, ಉದ್ಯಾವರ ನಾಗೇಶ್ ಕುಮಾರ್.

Udyavara

ಸಂಸ್ಥೆಯ 46ನೇ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ತಿಲಕರಾಜ್ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿಯವರು ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಸೋಮಶೇಖರ ಸುರತ್ಕಲ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು. ವೇದಿಕೆಯಲ್ಲಿ ನಿರ್ದೇಶಕರಾದ ಉದ್ಯಾವರ ನಾಗೇಶ್ ಕುಮಾರ್ ಮತ್ತು ಶರತ್ ಕುಮಾರ್ ಯು.ಪಧ್ಮನಾಭ ಕಾಮತ್, ಚಂದ್ರಾವತಿ ಎಸ್.ಭಂಡಾರಿ ಉಪಸ್ಥಿತರಿದ್ದರು.

ಸದಸ್ಯರನ್ನು ಉದ್ದೇಶಿಸಿ ಹಿರಿಯ ಸದಸ್ಯರಾದ ಶೇಖರ್ ಕೆ. ಕೋಟ್ಯಾನ್ ಮತ್ತು ರಮೇಶ್ ಕುಮಾರ್ ಉದ್ಯಾವರ್ ಮಾತನಾಡಿದರು.

ಪ್ರಧಾನ ಕಾರ್ಯದರ್ಶಿ ಗಿರೀಶ್ ಗುಡ್ಡೆಯಂಗಡಿ ವಂದಿಸಿದರು.

CATEGORIES
Share This

COMMENTS

Wordpress (0)
Disqus ( )
error: Content is protected !!