ಕನಕಶ್ರಿ ಮೊಗೇರ ಸಂಘಟನೆಯಿಂದ – ಅರಿವು 2019

 

ಪುತ್ತೂರು :ಕನಕಶ್ರಿ ಮೊಗೇರ ವಿದ್ಯಾರ್ಥಿ ಸಂಘಟನೆಯ ವತಿಯಿಂದ ನಡೆಯುವ ವಿದ್ಯಾರ್ಥಿ ಮಾಸಿಕ ಕಾರ್ಯಗಾರದ ಅಂಗವಾಗಿ, ಅಕ್ಟೋಬರ್ ತಿಂಗಳ ಕಾರ್ಯಗಾರವು ಅರಿವು 2019 ಮತ್ತು ರಾಷ್ಟ್ರೀಯ ಮೊಗೇರ ಯುವ ಪ್ರತಿಭೆಗೆ ಸನ್ಮಾನ ಎಂಬ ನಾಮಾಂಕಿತದೊಂದಿಗೆ ದಿನಾಂಕ 13.10. 2019 ನೇ ಭಾನುವಾರ, ವಿಟ್ಲದ ವಿಠ್ಠಲ ಬಾಲಿಕಾ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಾಗಾರವನ್ನು ಉದ್ಘಾಟಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಕನಕಶ್ರಿ ಮೊಗೇರ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಕುಮಾರಿ ಪ್ರಮೀಳಾ .ಡಿ. ಮಂಜೇಶ್ವರ ಇವರು, ನಮ್ಮ ಕನಕಶ್ರೀ ಮೊಗೇರ ವಿದ್ಯಾರ್ಥಿ ಸಂಘಟನೆ ಆರಂಭವಾಗಿ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿ, ಈಗ ಐದನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಮ್ಮ ಜನಾಂಗದ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇನ್ನು ಮುಂದಿನ ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ಪೂರಕ ವಾತಾವರಣ ನಿರ್ಮಾಣ ಮಾಡಿ ಅವರನ್ನು ಮುಂಚೂಣಿಗೆ ತರಲು ಯತ್ನಿಸಲಾಗುವುದು ಎಂದರು.

Kanakashri

ತಿಂಗಳ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಶ್ರೀ ಕಾಂತ್ ಪೂಜಾರಿ ಬಿರಾವು, ಜಿಲ್ಲಾ ಯುವ ಪರಿವರ್ತಕರು ಯುವ ಸ್ಪಂದನ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ಇವರು ಮಾತನಾಡಿ, ಯಾವುದೇ ಒಂದು ಸಂಘಟನೆಯನ್ನು ಹುಟ್ಟು ಹಾಕುವುದು ಸುಲಭ. ಆದರೆ ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ಬಹಳ ಕಷ್ಟದ ಕೆಲಸ. ಆದರೆ ಕನಕಶ್ರೀ ಮೊಗೇರ ಸಂಘಟನೆಯು ಇದನ್ನೆಲ್ಲಾ ಮೀರಿ ನಿಂತಿದೆ‌. ಇಂದಿನ ದಿನಗಳಲ್ಲಿ ಯಾವುದೇ ಸಂಘಟನೆಯ ಸಂಘಟಕರು ತಮ್ಮ ಸ್ವಾರ್ಥಕ್ಕಾಗಿ ಸಂಘಟನೆಗಳನ್ನು ಬಳಸಿಕೊಳುವುದು ಸಾಮನ್ಯ. ಆದರೆ ಕನಕಶ್ರಿ ಮೊಗೇರ ಸಂಘಟನೆಯು ಮೊಗೇರ ಜನಾಂಗದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ವಿದ್ಯಾರ್ಥಿ ಮಿತ್ರರಿಗೆ ಮತ್ತು ಯುವಜನತೆಗೆ ನನ್ನಿಂದ ಇನ್ನಷ್ಟು ಸಹಾಯ ಸಹಕಾರ ಬೇಕಾದರೆ ನಾನು ಸದಾ ಸಿದ್ದ ಎಂದರು.

Kanakashri

ವಿದ್ಯಾರ್ಥಿ ಸಂಘಟನೆಯ ಸದಸ್ಯೆ ಕುಮಾರಿ ದೀಪ್ತಿ ಅಗ್ರಾಳ ಪುಣಚ ಇವರು ದಿಕ್ಸೂಚಿ ಭಾಷಣ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಬಾಲಕೃಷ್ಣ ಕೇಪುಳು, ಉಪನ್ಯಾಸಕರು ದಂಡತೀರ್ಥ ಪಿ.ಯು. ಕಾಲೇಜು ಕಾಪು ಇವರು ಮಾತನಾಡಿ ನನಗೂ ಕನಕಶ್ರೀ ಸಂಘಟನೆಗೂ ಕಳೆದ ನಾಲ್ಕು ವರ್ಷಗಳ ಬಾಂಧವ್ಯವಿದೆ. ನಮ್ಮ ಜನಾಂಗದ ಸಂಘಟನೆಗಳಲ್ಲಿ ಅತೀ ವಿರಳವಾಗಿ, ಸರ್ವ ಜನಾಧರಣೀಯ ಸಂಘಟನೆಯಾಗಿ, ಮುಂಚೂಣಿಯಲ್ಲಿ ಕಾಣುವ ಸಂಘಟನೆ ಎಂದರೆ ಅದು ಕನಕಶ್ರೀ ಸಂಘಟನೆ. ಮೊಗೇರ ಜನಾಂಗದ ಎಲ್ಲಾ ಸಂಘಟನೆಗಳು ಕನಕಶ್ರೀ ಸಂಘಟನೆಯ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ನಮ್ಮ ಜನಾಂಗವು ಎಲ್ಲಾ ಕಡೆಗಳಲ್ಲಿ ಎಲ್ಲಾ ರೀತಿಯಲ್ಲೂ ಮುಂದೆ ಬರಲು ಸಾಧ್ಯ. ಕಾರ್ಯಗಾರವು ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭ ಹಾರೈಸಿದರು.

Kanakashri

ಮತ್ತೋರ್ವ ಮುಖ್ಯ ಅತಿಥಿ ಕಾವೇರಿ . ಹೆಚ್. ರಾಮಕುಂಜ, ಸಂಯೋಜಕರು ಜನಶಿಕ್ಷಣ ಟ್ರಸ್ಟ್ ಮುಡಿಪು, ಇವರು ಮಾತನಾಡಿ, ಮೊಗೇರ ಜನಾಂಗದ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಕನಕಶ್ರಿ ಮೊಗೇರ ಸಂಘಟನೆಯ ಕಾರ್ಯಕ್ರಮ ಅಭಿನಂದನಾರ್ಹವಾಗಿದೆ. ಅಲ್ಲದೇ ನಮ್ಮ ಸಮುದಾಯದ ರಾಷ್ಟ್ರೀಯ ಯುವ ಪ್ರತಿಭೆ ಭವ್ಯಶ್ರೀ ಏದಾರ್ ಇವರಿಗೆ ಸನ್ಮಾನ ಇಟ್ಟುಕೊಂಡಿರುವುದು ಶ್ಲಾಘನೀಯ. ನಿಮಗೆ ನನ್ನ ಸಹಾಯ ಸಹಕಾರ ಸದಾ ಇರುತ್ತದೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಮೊಗೇರ ಸಮುದಾಯದ ರಾಷ್ಟ್ರೀಯ ಯುವ ಪ್ರತಿಭೆ, ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಿ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಮಿಂಚುತ್ತಿರುವ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಭವ್ಯಶ್ರೀ ಏದಾರ್ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರಿ ಭವ್ಯಶ್ರೀ ಏದಾರ್ ನನ್ನ ಸಾಧನೆಗೆ ತಂದೆ ತಾಯಿ ಮತ್ತು ಗುರುಹಿರಿಯರ ಪ್ರೋತ್ಸಾಹವೇ ಕಾರಣ. ನಮ್ಮ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದರೆ ಯಶಸ್ಸು ಖಂಡಿತಾ. ಸನ್ಮಾನ ಮಾಡಿ ಇತರರಿಗೆ ಗುರುತಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಕನಕಶ್ರೀ ಮೊಗೇರ ಸಂಘಟನೆಯು ಸದಾ ಯಶಸ್ಸಿನ ಕಡೆಗೆ ಮುನ್ನಡೆಯುತ್ತಿರಲಿ ಎಂದು ಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಶ್ರೀಕಾಂತ್ ಪೂಜಾರಿ ಬಿರಾವು, ಕಾವೇರಿ ಹೆಚ್ ರಾಮಕುಂಜ, ಶ್ರೀ ಬಾಲಕೃಷ್ಣ ಕೇಪುಳು ಇವರುಗಳನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮತ್ತು ಶ್ರೀ ಬಾಲಕೃಷ್ಣ ಕೇಪುಳು ಇವರು ಇದೇ ತಿಂಗಳ 20ನೇ ತಾರಿಕಿನಂದು ಪುತ್ತೂರಿನಲ್ಲಿ ನಡೆಯಲಿರುವ ಯುವ ಕವಿಗೋಷ್ಠಿ ಯ ಆಮಂತ್ರಣ ಪತ್ರಿಕೆಯನ್ನು ಸುರೇಶ್ ಕುಮಾರ್ ಅವರಿಗೆ ನೀಡಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು.

Kanakashri

ವೇದಿಕೆಯಲ್ಲಿ ಉಪಸ್ಥಿತರಿದ್ದ , ಕನಕಶ್ರೀ ಮೊಗೇರ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳಾದ ಶ್ರೀ ಪ್ರಜ್ವಲ್ ರಾಜ್ ಗುತ್ತು, ಮತ್ತು ಶ್ರೀ ಗುರುಕಿರಣ್ ಮುನ್ಚಿಕಾನ , ಪೆರ್ಲ ಇವರು ಸಂಧರ್ಭೋಚಿತವಾಗಿ ಮಾತನಾಡಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನಕಶ್ರೀ ಮೊಗೇರ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾದ ಕುಮಾರಿ ಅಶ್ವಿನಿ ಮಾಣಿಲ ಇವರು ವಹಿಸಿದ್ದರು.

ಸಭಾ ಕಾರ್ಯಕ್ರಮದ ಬಳಿಕ ತಿಂಗಳ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಯುವ ಪರಿವರ್ತಕರಾದ ಶ್ರೀ ಶ್ರೀಕಾಂತ್ ಪೂಜಾರಿ ಬಿರಾವು ಅವರು ಇಂದಿನ ಯುವ ಜನತೆ ಎದುರಿಸುತ್ತಿರುವ ಸಮಸ್ಯೆ ಮತ್ತು ಅದಕ್ಕೆ ಪರಿಹಾರವನ್ನು ಹೇಗೆ ಪಡೆದುಕೊಳ್ಳಬಹುದು, ಮತ್ತು “ಯುವ ಸ್ಪಂದನ” ಅಂದರೆ ಏನು? ಇದು ಒಂದು ಇಲಾಖೆಯ ರೀತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸುತ್ತದೆ?, ಯುವಜನತೆಯ ಸಮಸ್ಯೆಗಳಿಗೆ ಏನೆಲ್ಲ ಕಾರಣವಾಗುತ್ತದೆ ಎಂದು ಸವಿವರವಾಗಿ ಮಾಹಿತಿ ನೀಡಿದರು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ವಿದ್ಯಾರ್ಥಿಗಳು ಹೇಗೆ ಉಪಯೋಗಿಸಿ, ಅದರಿಂದ ಉತ್ತಮ ಗುಣಮಟ್ಟದ ಅಂಶಗಳನ್ನು ಮಾತ್ರ ಪಡೆಯಬಹುದು? ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಪೊಷಕರ ಮತ್ತು ಶಿಕ್ಷಕರ ಪಾತ್ರವನ್ನು ಅವರು ವಿವರಿಸಿದರು. “ಯುವ ಸ್ಪಂದನ” ಇಲಾಖೆಯಲ್ಲಿ , ವೈಯಕ್ತಿಕ ಬೆಂಬಲ, ದೂರವಾಣಿ ಮೂಲಕ ಬೆಂಬಲ, ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ, ಆಪ್ತ ಸಮಾಲೋಚನೆ, ಉಲ್ಲೇಖನಾ ಸೇವೆ, ವ್ಯಕ್ತಿತ್ವ ವಿಕಸನ, ಭಾವನಾತ್ಮಕ ಹತೋಟಿ, ಬಿಕ್ಕಟ್ಟು ನಿರ್ವಹಣೆ, ಕಾರ್ಯಗಾರ ಮತ್ತು ತರಬೇತಿ, ಜ್ಞಾನ ಕೇಂದ್ರ, ಸಂಬಂಧ ಸುಧಾರಣೆ ಮತ್ತು ಸುರಕ್ಷತೆ, ಸಂವಹನ, ಆರೋಗ್ಯ ಮತ್ತು ಜೀವನ ಶೈಲಿ, ಯುವ ಸಬಲೀಕರಣ, ಲಿಂಗ-ಲೈಂಗಿಕತೆ, ಸ್ವ-ಅರಿವು, ಸಹಾನುಭೂತಿ, ಸೃಜನಾತ್ಮಕ ಚಿಂತನೆ, ವಿಮರ್ಷಾತ್ಮಕ ಚಿಂತನೆ, ಮುಂತಾದ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಯುವ ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಪನ್ಮೂಲ ವ್ಯಕ್ತಿ ಕರೆ ನೀಡಿದರು.

ವಿದ್ಯಾರ್ಥಿಗಳಾದ ತೇಜಸ್ ಮುನ್ಚಿಕಾನ ಪೆರ್ಲ, ಗುರುಕಿರಣ್ ಮುನ್ಚಿಕಾನ ಪೆರ್ಲ, ಪ್ರಜ್ವಲ್ ರಾಜ್ ಗುತ್ತು, ಚೇತನಾ ಪುಣಚ, ಅಶ್ವಿತಾ ಅಳಿಕೆ ಮುಂತಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಇದೊಂದು ಅತ್ಯುತ್ತಮ ಕಾರ್ಯಕ್ರಮ ಎಂದರು.

ಮದ್ಯಾಹ್ನದ ಭೋಜನದ ಬಳಿಕ ನಡೆದ
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕನಕಶ್ರೀ ಮೊಗೇರ ಸಂಘಟನೆಯ ಅಧ್ಯಕ್ಷರಾದ ಸುರೇಶ್ ಕುಮಾರ್ ಜಿ. ಪೆರುವಾಯಿ ಗುತ್ತು, ಕಾರ್ಯದರ್ಶಿ ಅಶೋಕ್ ಕುಮಾರ್ ಒಡಿಯೂರ್, ಕನಕಶ್ರೀ ಮಾಧ್ಯಮ ವಕ್ತರರಾದ ಎನ್.ಕೆ. ಸುಂದರ್ ರಾಜ್ ಕುರಿಯ ಪುತ್ತೂರು, ಕನಕಶ್ರೀ ಪುತ್ತೂರು ಪಡೀಲ್ ಘಟಕದ ಅಧ್ಯಕ್ಷರಾದ ಗಣೇಶ್ ಪಡೀಲ್, ನವಜೀವನ ರಾಷ್ಟ್ರೀಯ ಪುರಸ್ಕಾರ  ಪಡೆದ ಹರೀಶ್ ಪಡೀಲ್, ಯುವ ಕವಿ ನಾರಾಯಣ ಕೆ. ಕುಂಬ್ರ ಮುಂತಾದವರು ಉಪಸ್ಥಿತರಿದ್ದರು. ಸಂಘಟಕರಾದ ಕಿರಣ್ ಕುಮಾರ್ ತೆಗ್ಗು ಧ್ವನಿವರ್ಧಕದಲ್ಲಿ ಸಹಕರಿಸಿದರು.

ಅಧ್ಯಕ್ಷರಾದ ಸುರೇಶ್ ಕುಮಾರ್ ಪೆರುವಾಯಿ ಗುತ್ತು ಸ್ವಾಗತಿಸಿ, ವಿದ್ಯಾರ್ಥಿಗಳಾದ ಅಮೃತಾನಂದ ಮಂಕುಡೆ ಗತ ತಿಂಗಳ ವರದಿ ವಾಚಿಸಿದರು. ಕನಕಶ್ರೀ ಸಂಘಟನೆಯ ಮೊದಲ ಶಿಕ್ಷಕಿ ಮತ್ತು ಸಂಘಟಕರಾದ ಕುಮಾರಿ ಕಾವ್ಯಶ್ರೀ ಅಳಿಕೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ವರದಿ : ಎನ್.ಕೆ.ಸುಂದರ್ ರಾಜ್

CATEGORIES
Share This

COMMENTS

Wordpress (0)
Disqus (0 )
error: Content is protected !!