ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಬಂಧನ ?..

ಮಂಗಳೂರು : ಉಳ್ಳಾಲ ದ ಮುಕ್ಕಚ್ಚೆರಿ ಎಂಬಲ್ಲಿ ಕಳೆದ ತಿಂಗಳು ಸೆ.22 ರಂದು ರಾತ್ರಿ ನಡೆದಿದೆ ಎನ್ನಲಾದ ಶೂಟೌಟ್ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೊಹೈಲ್ ಕಂದಕ್ ನನ್ನು ಉಳ್ಳಾಲ ಪೋಲಿಸರು ಗುರುವಾರ ಬಂಧಿಸಿದ್ದಾರೆ ಎನ್ನಲಾಗಿದೆ.

Sohail kandak

ವಾಟ್ಸ್ ಪ್ ಸ್ಟೇಟಸ್ ವಿಚಾರಕ್ಕೆ ಸಂಬಂಧಿಸಿದ ವಿಷಯದ ವಿಚಾರ ಮಾಡಲು ಸೊಹೈಲ್ ಕಂದಕ್ , ಬಶೀರ್ ತನ್ನ 6 ಜನ ಸ್ನೇಹಿತರ ಜೊತೆ ಉಳ್ಳಾಲದ  ಮುಕ್ಕಚ್ಚೆರಿ  ಗೆ ಹೋಗಿ ಅಲ್ಲಿ ಸಲ್ಮಾನ್ ಎಂಬುವನನ್ನು ವಿಚಾರಿಸುತ್ತಿರುವಾಗ ಪಕ್ಕದಲ್ಲೇ ಇದ್ದ ಇನ್ನೊಂದು ಗುಂಪಿನ ಜೊತೆ ಮಾತಿಗೆ ಮಾತು ಬೆಳೆದು ಅದು ಅತಿರೇಕಕ್ಕೆ ತಿರುಗಿದಾಗ ಸೊಹೈಲ್ ಕಂದಕ್ ತನ್ನ ಪರವಾನಿಗೆ ಹೊಂದಿರುವ ಪಿಸ್ತುಲ್ ನಿಂದ 6 ಸುತ್ತು ಗುಂಡು ಹಾರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಹೈಲ್ ಕಂದಕ್ ಸೇರಿದಂತೆ ಎರಡು ಗುಂಪಿನ  ಒಟ್ಟು 13 ಜನರನ್ನು ಬಂಧಿಸಲಾಗಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!