ಮಠಂತಬೆಟ್ಟು ಮಹಿಷಮರ್ದಿನಿ ಸನ್ನಿಧಿಯಲ್ಲಿ ಶ್ರೀಮತಿ ಅನಿತ ಹೇಮನಾಥ್ ಶೆಟ್ಟಿ

Matanthabettu

ಪುತ್ತೂರು : ಪುತ್ತೂರು ತಾಲೂಕು ಕೋಡಿಂಬಾಡಿ, ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಸ್ಥಾನ ದಲ್ಲಿ ನವರಾತ್ರಿ ಉತ್ಸವದ 3ನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಅನಿತಾ ಹೇಮನಾಥ್ ಶೆಟ್ಟಿ ಯವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಕೋರಿದರು.

Matanthabettu

ಈ ಸಂದರ್ಭದಲ್ಲಿ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಮಹಿಳಾ ಸಮಿತಿಯು ದೇವಸ್ಥಾನಕ್ಕೆ ನೀಡಲ್ಪಟ್ಟ ಧ್ವನಿವರ್ಧಕ ಹಸ್ತಾಂತರ ನಡೆಯಿತು.
ರಾಜ್ಯ , ರಾಷ್ಟ್ರ ಮಟ್ಟದ ವಿವಿಧ ವಿಭಾಗಗಳಲ್ಲಿ ಮತ್ತು ಪಿಯುಸಿ, ಎಸ್. ಎಸ್. ಎಲ್. ಸಿ ಯಲ್ಲಿ ಉತ್ತಮ ಅಂಕಗಳನ್ನು ಪಡೆದಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆಯ ಜೊತೆಗೆ ಹಿರಿಯರಾದ ಶ್ರೀಮತಿ ಗುಲಾಬಿ ಅನಂತ ರೈ ರವರಿಗೆ ಸನ್ಮಾನಿಸಲಾಯಿತು.

Matanthabettu
ಕಾರ್ಯಕ್ರಮದಲ್ಲಿ  ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಶಯನ ಜಯಾನಂದ, ಶ್ರೀಮತಿ ಸುಮ ಅಶೋಕ್ ರೈ , ಪದ್ಮಾವತಿ ಆರ್ ಹೊಳ್ಳ ಕಲ್ಲಡ್ಕ , ಕೋಡಿಂಬಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಚಿತ್ರಾವತಿ, ಗಿರಿಜ   ರಾಮಣ್ಣ ಶೆಟ್ಟಿ, ಶ್ರೀಮತಿ ಪದ್ಮಾವತಿ ವಾಸಪ್ಪ ಗೌಡ, ಶ್ರೀಮತಿ ಸಹನಾ ಭವಿನ್ ಸೌಜನಿ ಉಪಸ್ಥಿತರಿದ್ದುು ರಶ್ಮಿ ನಿರಂಜನ್ ರೈ ಸ್ವಾಗತಿಸಿ ಪವಿತ್ರ ಡೆಕ್ಕಾಜೆ ಧನ್ಯವಾದ ಮಾಡಿದರು.

CATEGORIES
Share This

COMMENTS

Wordpress (0)
Disqus (0 )
error: Content is protected !!