ನಾಳೆ ದೇವಿ ಮಹಿಷಮರ್ದಿನಿಯ “ವರ ಪುರ್ಸದ”

ಪುತ್ತೂರು: ನಾಡಿನಾದ್ಯಂತ ಇರುವ ವಿವಿಧ ದೇವರುಗಳ ಭಕ್ತಿಗೀತೆಗಳನ್ನು ನಾವೆಲ್ಲರೂ ಆಸ್ವಾದಿಸಿದ್ದೇವೆ, ಅದೇ ರೀತಿಯಲ್ಲಿ ಹಳ್ಳಿ ಪ್ರದೇಶದಲ್ಲಿ ನೆಲೆಯಾಗಿ ಜನರ ಇಷ್ಪಾರ್ಥ ನೆರವೇರಿಸುತ್ತಿರುವ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಯ ಕ್ಷೇತ್ರದ ಮಹೀಮೆಯನ್ನು ಮತ್ತು ಭಕ್ತಿಯನ್ನು ಸಾರುವ ಭಕ್ತಿಗೀತೆಯ ಸಂಕಲನವು ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಸಂಚಲನವನ್ನೇ ಉಂಟುಮಾಡಿ ಸರಿ ಸುಮಾರು 55,000ಕ್ಕೂ ಅಧಿಕ ಜನ ನೋಡಿ ಆನಂದಿಸಿದ “ಅಜ್ಜನ ಕರಿಗಂಧ” ಖ್ಯಾತಿಯ ಯುವವಾಗ್ಮಿ, ಮದಿಪುದ ಮಾಣಿಕ್ಯ ಬಿರುದಾಂಕಿತ “ಮನ್ಮಥ ಶೆಟ್ಟಿ” ಕೊಡಿಪ್ಪಾಡಿ, ಪುತ್ತೂರು ಇವರ ಸಾಹಿತ್ಯದಲ್ಲಿ ಮೂಡಿಬರಲಿದೆ.

Mattantabettu
ಶ್ರೀ ದೇವಿಯ ಭಕ್ತರ ತಂಡವೊಂದರ ನಿರ್ಮಾಣದ ಈ ಭಕ್ತಿಗೀತೆ ದ್ವನಿಸುರುಳಿಯು ದಿನಾಂಕ 05-10-2019 ನೇ ಶನಿವಾರ ರಾತ್ರಿ ಗಂಟೆ 9:00 ಕ್ಕೆ ಸರಿಯಾಗಿ ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ “ಚಿನ್ಮಯೀ” ಸಭಾಂಗಣದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.
“ವರ ಪುರ್ಸದ” ದ ಹೆಚ್ಚಿನ ಮಾಹಿತಿ ಮತ್ತು ಇದರ ತಂತ್ರಜ್ಞರ ಸಂಪೂರ್ಣ ಮಾಹಿತಿ ದಿನಾಂಕ 05/10/2019 ನೇ ಶನಿವಾರ ರಾತ್ರಿ ನಿಮ್ಮ “ಜನತೆ.ಕಾಂ” ಮತ್ತು “ತುಳುವೆರ ತುಡರ್” ಯು ಟ್ಯೂಬ್ ಚಾನಲ್ ನಲ್ಲಿ ಮಾತ್ರ.

CATEGORIES
Share This

COMMENTS

Wordpress (0)
Disqus (0 )
error: Content is protected !!