ಕರಾವಳಿಯಿಂದ “ರೈ” ಅರ್ಹವಾಗಿಯೇ ವಿಧಾನಪರಿಷತ್ ಗೆ ಆಯ್ಕೆಯಾಗಬೇಕಿದೆ.

ಮಂಗಳೂರು (ಮೇ.22) ಕರಾವಳಿ ಭಾಗದಲ್ಲಿ ಯಾರಬಳಿ ಕೆಲಸ ಆಗಿಲ್ಲ ಅಂದರು ರಮಾನಾಥ್ ರೈ ಬಳಿ ರಾಜಕೀಯ, ಜಾತಿ, ಸಂಬಂಧ ರಹಿತವಾಗಿ ಸಾರ್ವಜನಿಕರ ಕೆಲಸ ಕಾರ್ಯ ಆಗುತ್ತದೆ ಅದೂ ಅಲ್ಲೇ ಡ್ರಾ ಅಲ್ಲೇ ಬಹುಮಾನ ರೀತಿಯಲ್ಲಿ ನಡೆಯುತ್ತೆ.

ಬಿ ರಮಾನಾಥ ರೈ

ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿ 9 ಬಾರಿ ಚುನಾವಣೆ ಎದುರಿಸಿ 6ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ “ರೈ” 3ಬಾರಿ ಸಚಿವರಾಗಿಯೂ ಕರಾವಳಿ ಭಾಗದ ಅಭಿವೃದ್ಧಿ ಗೆ ತನ್ನ ಕೈ ಮೀರಿ ಪ್ರಯತ್ನಪಟ್ಟು ಯಶಸ್ವಿಯಾಗಿದ್ದರೆ. ಅಧಿಕಾರಕ್ಕಾಗಿ ಆಸೆ ಪಡದೇ ಗುಂಪುಗಾರಿಕೆ ಮಾಡದೇ ಪಕ್ಷದ ಆದೇಶಗಳಿಗೆ ಅನುಗುಣವಾಗಿ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದರಲ್ಲದೇ ಕಾಂಗ್ರೆಸ್ ಪಕ್ಷಕ್ಕಾಗಿ ಮಂಗಳೂರಿನ ಕೇಂದ್ರ ಪ್ರದೇಶದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಾಣ ಮಾಡಿ ಬಾಡಿಗೆ ಕೋಣೆಯಲಿದ್ದ ಕಾಂಗ್ರೆಸ್ ಕಛೇರಿಗೆ ಸ್ವಂತ ಕಟ್ಟಡ ಒದಗಿಸಿ ಕಟ್ಟಡದ ಯಶಸ್ವಿನ ರೂವಾರಿಯಾಗಿ ರೈ ಮೂಡಿ ಬಂದಿದ್ದಾರೆ. ತಾನು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚುಕ್ಕಾಣಿ ಹಿಡಿದ ಸಮಯದಲ್ಲಿ ಜಿಲ್ಲೆಯಾದ್ಯಂತ ಪಕ್ಷವನ್ನು ಕಟ್ಟಿ ಕಾರ್ಯಕರ್ತರನ್ನು ಹುರಿದುಂಬಿಸಿ ಕೋಮುವಾದಿ ಬಿಜೆಪಿ ಪಕ್ಷದ ಭದ್ರಕೋಟೆಯಾಗಿದ್ದ ಕರಾವಳಿ ಭಾಗದಲ್ಲಿ 8 ವಿಧಾನಸಭಾ ಕ್ಷೇತ್ರದಲ್ಲಿ 7ರಲ್ಲಿ ಜಯಭೇರಿ ಗಳಿಸಲು “ರೈ” ಕೆಲಸ ಕಾರ್ಯವೇ ಸಾಕ್ಷಿ. ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮಂಗಳೂರು ಕ್ಷೇತ್ರದ ಅಭ್ಯರ್ಥಿ ಪರ ಹಗಲಿರುಳು ಕಾಲಿಗೆ ಚಕ್ರ ಕಟ್ಟಿ ಕರಾವಳಿಯದ್ಯಂತ ಪ್ರಚಾರದಲ್ಲಿ ತೊಡಗಿ ಪಕ್ಷನಿಷ್ಠೆ ತೋರಿದ್ದಾರೆ.

Advertisement

ಸದ್ಯ ಕರಾವಳಿ ಕಾಂಗ್ರೆಸ್ ನಾ ಕಾರ್ಯಕರ್ತರೆಲ್ಲರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ “ರೈ” ಕೈಯಲ್ಲಿ ಯಾವುದೇ ಹುದ್ದೆ ಇಲ್ಲದೇ ಇರುವುದನ್ನು ಕಂಡು ರಾಜ್ಯದಲ್ಲಿ ವಿಧಾನಪರಿಷತ್ ಸ್ಥಾನಗಳಿಗೆ ಮುಂದಿನ ಜೂನ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು ಕರಾವಳಿ ಭಾಗದಿಂದ “ರೈ” ಗಳಿಗೆ ಅವಕಾಶ ನೀಡುವಂತೆ ಡಾ| ರಘು ಬೆಳ್ಳಿಪ್ಪಾಡಿ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿಯಾದ ರಮಾನಾಥ್ ರೈ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಸಿದ್ದರಾಮಯ್ಯ ಸಕಾರತ್ಮಕ ಭರವಸೆ ನೀಡಿದ್ದು ಸದ್ಯ ಭರವಸೆ ಈಡೇರಿಸುವ ಸಮಯ ಬಂದಿದ್ದು ರಮಾನಾಥ ರೈ ವಿಧಾನಪರಿಷತ್ ಸದಸ್ಯರಾಗಿ, ಸಚಿವರಾಗಿ ಮತ್ತೆ ಕರಾವಳಿ ಕಾಂಗ್ರೆಸ್ ಸದೃಢವಾಗಿ ಸಂಘಟಿತವಾಗಲಿ ಕರಾವಳಿ ಭಾಗದಲ್ಲಿ ಸಾಮರಸ್ಯ ನೆಲೆಯಾಗಲಿ ಕರಾವಳಿಯ ಅಭಿವೃದ್ಧಿ ಉಳಿದ ಜಿಲ್ಲೆಗಳಿಗೆ ಮಾದರಿಯಾಗಲಿ ಎಂಬುದು ಕರಾವಳಿ ಭಾಗದ ನಿಷ್ಠಾವಂತ ಕಾರ್ಯಕರ್ತರ ಅಪೇಕ್ಷೆ.

CATEGORIES
TAGS
Share This

COMMENTS

Wordpress (0)
Disqus (0 )
error: Content is protected !!