ಜಾತಿನಿಂದನೆ ಪ್ರಕರಣ ದಾಖಲಾಗುತ್ತಲೇ ಅರೆಸ್ಟ್ : ಸುಪ್ರೀಂಕೋರ್ಟ್

ದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ವಿರುದ್ಧ ಜಾತಿನಿಂದನೆ (ಅಟ್ರಾಸಿಟಿ ಪ್ರಕರಣಗಳು) ಮಾಡಿ ಪ್ರಕರಣಗಳು ದಾಖಲಾಗುತ್ತಲೇ ಪೂರ್ವವಿಚಾರಣೆ ಇಲ್ಲದೆ ಎಫ್​ಐಆರ್​ ದಾಖಲಿಸುವ ಮತ್ತು ತಕ್ಷಣವೇ ಆರೋಪಿಯನ್ನು ಬಂಧಿಸುವ ನಿಯಮವನ್ನು ಜಾರಿಗೊಳಿಸಿ ಸುಪ್ರೀಂಕೋರ್ಟ್​ ಆದೇಶಿಸಿದೆ.

Supreme Court
2018ರ ಮಾರ್ಚ್​ 20ರಂದು ನೀಡಿದ್ದ ತನ್ನ ತೀರ್ಪಿನಲ್ಲಿ ದೂರು ದಾಖಲಾಗುತ್ತಲೇ ಆರೋಪಿಯನ್ನು ಬಂಧಿಸಬಾರದು. ಇದು ಸಂವಿಧಾನದ ಆಶಯಕ್ಕೆ ವಿರುದ್ಧ ಎಂದು ಹೇಳಿತ್ತು. ಈ ನಿಯಮವನ್ನು ಮರುಪರಿಶೀಲಿಸುವಂತೆ ಕೋರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ತನ್ನ ನಿರ್ಧಾರವನ್ನು ಪ್ರಕಟಿಸಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗದವರ ಸಮಾನತೆಯ ಹೋರಾಟ ಇನ್ನೂ ಮುಗಿದಿಲ್ಲ. ಈಗಲೇ ಅವರ ವಿರುದ್ಧ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಅಸ್ಪೃಶ್ಯತೆ ಇನ್ನೂ ಅಳಿದಿಲ್ಲ. ಸ್ವಚ್ಛತಾ ಕಾರ್ಮಿಕರಿಗೆ ಈಗಲೂ ಆಧುನಿಕ ಸೌಲಭ್ಯಗಳನ್ನು ನೀಡಲಾಗಿಲ್ಲ ಎಂದು ಹೇಳಿ, ತನ್ನ ಹಿಂದಿನ ತೀರ್ಪನ್ನು ಮರುಪರಿಷ್ಕರಿಸಿ ಆದೇಶಿಸಿದೆ.

CATEGORIES
Share This

COMMENTS

Wordpress (0)
Disqus (0 )
error: Content is protected !!