ಆಹಾರ ಇಲ್ಲದೆ ಪರದಾಡುತ್ತಿದ್ದ ಶ್ವಾನವನ್ನು “ಸ್ನೇಕ್ ಫಾಹಿಝ್” ಬಳಗದಿಂದ ರಕ್ಷಣೆ.

 

ಪುತ್ತೂರು : (ಮೇ.19) ಕೋವಿಡ್-19 ಎಂಬ ಮಹಾಮಾರಿಯಿಂದ ಲಾಕ್ ಡೌನ್ ಸಮಯದಲ್ಲಿ ಹಲವಾರು ಜನರು ಆಹಾರ ಇಲ್ಲದೆ ಪರದಾಡುತ್ತಿರುವಾಗ ಸಾಕಷ್ಟು ಮೂಕ ಪ್ರಾಣಿಗಳು ಹಸಿವಿನಿಂದ ಪ್ರಾಣ ಕಳೆದಿವೆ. ಇದೇ ರೀತಿ ಪುತ್ತೂರಿನ ಕಲ್ಲಾರೆ’ಯ “ವೆಂಕಟರಾವ್ ಬಡಾವಣೆ” ಎಂಬಲ್ಲಿ ಕಾಮಗಾರಿ ಸ್ಥಗಿತಗೊಂಡಿರುವ ಸರ್ವಿಸ್ ಸ್ಟೇಷನ್ ಹೊಂಡದೊಳಗೆ ಎರಡು ದಿನದಿಂದ ಆಹಾರವಿಲ್ಲದೆ ಪರದಾಡುತಿದ್ದ ಶ್ವಾನ’ ವನ್ನು ಉರಗ ರಕ್ಷಕ ಸಾಮೆತಡ್ಕ ನಿವಾಸಿ ” ಸ್ನೇಕ್ ಫಾಹಿಝ್” ತನ್ನ ಸ್ನೇಹಿತರ ಜೊತೆ ಸೇರಿ ರಕ್ಷಿಸಿದರು.

Fahiz

ಪಕ್ಕದ ಫ್ಲಾಟ್ ನಿವಾಸಿಯೊರ್ವರ ಫೋನ್ ಕರೆಗೆ ಓಗೊಟ್ಟು ತಕ್ಷಣ ಸ್ಥಳಕ್ಕೆ ಆಗಮಿಸಿ ಶ್ವಾನವನ್ನು ರಕ್ಷಣೆ ಮಾಡಿದರು. ಈ ವೇಳೆ ಪ್ರಶಾಂತ್ ಸಾಮೆತಡ್ಕ, ಫರ್ವೇಝ್ ಸಾಮೆತಡ್ಕ, ವಲ್ಲಿ ಆಟೋ’ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಫಾಹಿಝ್ ರವರು ಕೆಲವು ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ‘ಕುವೆಟ್ಟು’ ಎಂಬಲ್ಲಿ ಮನೆಯಂಗಳದ ಗಾರ್ಡನ್ ನಲ್ಲಿ ಸಿಕ್ಕಿದ 13 ನಾಗರ ಹಾವಿನ ಮೊಟ್ಟೆಯನ್ನು ರಕ್ಷಿಸಿ ಪುತ್ತೂರಿನ ಡಾ. ಐತಾಳರ ಮಾರ್ಗದರ್ಶನದಂತೆ ತಂದು ಐತಾಳರ ಉರಗ ಸಂರಕ್ಷಣಾ ಕೇಂದ್ರಕ್ಕೆ ತಂದು ಒಪ್ಪಿಸಿದ್ದಾರೆ.
ನಿಮ್ಮ ಮನೆಯ ಆಸುಪಾಸಿನಲ್ಲಿ ಸರಿಸೃಪಗಳು ತೊಂದರೆ ಅನುಭವಿಸುವುದು ಕಂಡರೆ ನನಗೆ ಕರೆ (📞 9148521275(ಸ್ನೇಕ್ ಫಾಹಿಝ್) ಮಾಡಿ. ನಾನು ಸಹಾಯಕನಾಗುತ್ತೇನೆ ಎಂದು ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!