ಮಂಗಳೂರಿನಲ್ಲಿ ವಿದ್ಯಾರ್ಥಿಯ ಕೊಲೆ ಪ್ರಕರಣ, ಸಮಗ್ರ ತನಿಖೆಗೆ ಎನ್.ಯಸ್.ಯು.ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯ.

ಉಳ್ಳಾಲ (ಏ. 4) : ಕೆಸಿ ರೋಡಿನಲ್ಲಿ ನಡೆದ 12 ವರ್ಷದ ಬಾಲಕನ ಕೊಲೆ ಪ್ರಕರಣವನ್ನು ಗಂಭೀರವಾಗಿ
ಪರಿಗಣಿಸಿ, ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಎನ್.ಯಸ್.ಯು.ಐ ಒತ್ತಾಯಿಸುತ್ತದೆ ಹನೀಫ್ ಎಂಬುವವರ ಪುತ್ರ ಹಾಕಿಫ್ ಎಂಬಾತ ಶನಿವಾರ ರಾತ್ರಿಯಿಂದ ಕಾಣೆಯಾಗಿದ್ದು ಅದಿತ್ಯವಾರ ಆತನ ಮೃತದೇಹ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆಯು ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ ಹಾಗೂ ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ.

Sawad sullia

ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಿಂದ ಆನ್‍ಲೈನ್ ಗೇಮ್ ವಿಚಾರವಾಗಿ ನಡೆದ ತರ್ಕ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಘಟನೆಯಲ್ಲಿ ಆರೋಪಿ ಜೊತೆ ಬೇರೆ ಯಾರದರೂ ಶಾಮಿಲಾಗಿದ್ದಾರೆಯೇ ಎಂಬ ಸಂಶಯ ಸಾರ್ವಜನಿಕರಲ್ಲಿ ಹುಟ್ಟು ಹಾಕಿದೆ. ಹೀಗಿರುವಾಗ ಪೊಲೀಸ್ ಇಲಾಖೆ ಈ ಪ್ರಕರಣದ ಬಗ್ಗೆ ವಿವಿಧ ಆಯಮಗಳಿಂದ ಸಮಗ್ರವಾದ ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಿ, ಸಾರ್ವಜನಿಕರ ಸಂಶಯಗಳಿಗೆ ತೆರೆ ಎಳೆದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಮುಂದಾಗಬೇಕೆಂದು
ಎನ್.ಯಸ್.ಯು.ಐ ಜಿಲ್ಲಾ ಅಧ್ಯಕ್ಷ ಸವಾದ್ ಸುಳ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!