ಪುತ್ತೂರು ನಗರದಾದ್ಯಂತ ಮಾಸ್ಕ್ ವಿತರಣೆ ಯುವ ಕಾಂಗ್ರೆಸ್ ನಿಂದ ಕೋವಿಡ್-19 ಜಾಗೃತಿ ಕಾರ್ಯಕ್ರಮ.

Youth congress puttur

ಪುತ್ತೂರು : (ಎ.01) ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಆಶ್ರಯದಲ್ಲಿ ಅಧ್ಯಕ್ಷ ಪ್ರಸಾದ್ ಎನ್. ಎಸ್. ಪಾಣಾಜೆ ನೇತೃತ್ವದಲ್ಲಿ ಪುತ್ತೂರು ನಗರದಾದ್ಯಂತ ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು.
ಈ‌ ಕಾರ್ಯಕ್ರಮವನ್ನು ದರ್ಬೆ ವೃತ್ತದಲ್ಲಿ ಕೇರಳ ವಿಧಾನಸಭಾ ಚುನಾವಣಾ ಎಐಸಿಸಿ ವೀಕ್ಷಕ
ಹೇಮನಾಥ ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿ ನಮ್ಮ ಜೀವ ನಮ್ಮ ಕೈಯಲ್ಲೇ ಇದೆ. ಸರಕಾರಗಳ ನಿರ್ಲಕ್ಷತನದಿಂದ ಆಪತ್ತು ಬಂದೊದಗಿದೆ. ಈಗ ನಾವು ಜಾಗೃತರಾಗಬೇಕು. ಆ ಮೂಲಕ ಕೋವಿಡ್ -19 ತಡೆಗಟ್ಟುವ ಪ್ರಯತ್ನ ಮಾಡಬೇಕು. ಜನ ಜಾಗೃತರಾಗಬೇಕು ಈ ನಿಟ್ಟಿನಲ್ಲಿ ನಿರಂತರ ಜನರ ಬಗ್ಗೆ ಕಾಳಜಿ ವಹಿಸಿಕೊಂಡು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವ ಯುವ ಕಾಂಗ್ರೆಸ್ ಕಾರ್ಯ ಶ್ಲಾಘನೀಯ ಎಂದರು.

Youth congress puttur

ಯುವ ಕಾಂಗ್ರೆಸ್ ನಿರಂತರ ಜನರ ಸಂಕಷ್ಟ ಪರಿಹಾರದಲ್ಲಿ ತೊಡಗಿಸಿಕೊಂಡಿದೆ. ಇವರಿಗೆ ನಾವೆಲ್ಲ ಬೆಂಬಲ ನೀಡಬೇಕು. ಜನರು ಕೋವಿಡ್-19 ಹರಡದಂತೆ ಜಾಗೃತರಾಗಬೇಕು ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಯವರು ಹೇಳಿದರು.
ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಪ್ರಸಾದ್ ನಿರಂತರವಾಗಿ ಕಾರ್ಯಕ್ರಮವನ್ನು ಹಾಕಿಕೊಂಡು ಸಾರ್ವಜನಿಕರನ್ನು ಜಾಗೃತಿಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ‌ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವರು ಹೇಳಿದರು. ನಗರ ಕಾಂಗ್ರೆಸ್ ಮಾಜಿ‌ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ರವರು ಮಾತನಾಡಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮೊದಲೇ ಎಚ್ಚರಿಸಿದರೂ ಜಾಗೃತರಾಗದ ಕೇಂದ್ರ ಸರಕಾರದ ನಿಲುವಿನಿಂದಾಗಿ ಇಂದು ನಾವೆಲ್ಲ ಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು. ಸೇವಾದಳದ ಜೋಕಿಂ ಡಿಸೋಜರು ಸಂದರ್ಭೋಚಿತವಾಗಿ ಮಾತನಾಡಿದರು.

Youth congress puttur
ಅಶೋಕ್ ಬೂಡೋಳಿ, ನಗರಸಭಾ ಸದಸ್ಯ ರಾಬಿನ್ ತಾವ್ರೊ , ನಗರಸಭಾ ನಾಮ ನಿರ್ದೇಶಿತ ಮಾಜಿ ಸದಸ್ಯ
ಕೇಶವ ಬೆದ್ರಾಳ, ಎನ್. ಎಸ್. ಯು. ಐ ರಾಜ್ಯ ಕಾರ್ಯದರ್ಶಿ ಫಾರೂಕ್ ಬಾಯಬೆ,
ಶಮೀಮ್ ಗಾಳಿಮುಖ, ಆಶಿಕ್ ಅರಂತೋಡು,
ರಶೀದ್ ಮುರ, ಮೋನು ಬಪ್ಪಳಿಗೆ, ಸಮದ್ ಸಂಟ್ಯಾರ್, ಕಾಂಗ್ರೆಸ್ ಸಾಮಾಜಿಕ‌ ಜಾಲತಾಣದ ಸಂಚಾಲಕ ಜಗದೀಶ್ ಕಜೆ, ಕಾರ್ತಿಕ್ ಡಿ. ಜಿ, ರವೂಫ್ ಸಾಲ್ಮರ, ನೇಮಾಕ್ಷ ಸುವರ್ಣ ಅಮ್ಮುಂಜೆ, ರವಿಚಂದ್ರ ಆಚಾರ್ಯ, ಅಭಿಷೇಕ್ ಆಚಾರ್ಯ ಸಾಮೆತ್ತಡ್ಕ, ಬಶೀರ್ ಪರ್ಲಡ್ಕ, ಶರೀಫ್ ಬಲ್ನಾಡ್, ದಿನೇಶ್ ಯಾದವ್, ಬೋಳೋಡಿ ಚಂದ್ರಹಾಸ ರೈ , ರವಿಪ್ರಸಾದ್ ಶೆಟ್ಟಿ ಬನ್ನೂರು, ಸಿದ್ದಿಕ್ ಸುಲ್ತಾನ್ , ರಹಿಮ್ ಸಂಪ್ಯ, ಅಬ್ದಲ್ ಕೂರ್ನಡ್ಕ, ಯೂನುಸ್ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಾರ್ಯಕ್ರಮ ಆಯೋಜಕ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಪಾಣಾಜೆ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಸನದ್ ಯೂಸುಫ್ ವಂದಿಸಿದರು.

CATEGORIES
TAGS
Share This

COMMENTS

Wordpress (0)
Disqus ( )
error: Content is protected !!